ಬೆಂಗಳೂರು ;- ಸಾರ್ವಜನಿಕರು ಎದುರಿಸುವ ಟ್ರಾಫಿಕ್ ಸಂಬಂಧಿತ ಸಮಸ್ಯೆಗಳನ್ನು ಈಗ 112 ಸೇವೆಯ ಮೂಲಕ ಪರಿಹರಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಆನ್ ಕೋಬ್ರಾಸ್ 112 ಸೇವೆಯ ಮೂಲಕ ಸ್ವೀಕರಿಸಿದ ಟ್ರಾಫಿಕ್ ನಿರ್ವಹಣೆಗೆ ಸಂಬಂಧಿಸಿದ ದೂರುಗಳನ್ನು ಪರಿಹಾರ ಮಾಡು ಕೆಲಸ ಮಾಡುತ್ತಾರೆ.
ಈ ಹಿಂದೆ ಮಾಸಿಕ ಜನಸಂಪರ್ಕ ಸಭೆಯಲ್ಲಿ ಸಂಚಾರ ವಿಭಾಗದವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳಿಗೆ 112 ಸೇವೆಯನ್ನು ತೆರೆಯುವ ಆಲೋಚನೆಯನ್ನು ನಾಗರಿಕರೊಬ್ಬರು ಸೂಚಿಸಿದ್ದರು. ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಸಭೆ ತಿರುಪತಿ ಕನ್ವೆನ್ಷನ್ ಹಾಲ್ನಲ್ಲಿ ಶನಿವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಮಾಸಿಕ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ದಯಾನಂದ ಅವರು ಹನುಮಂತನಗರದ ಶಂಕರ್ ನಾಗ್ ಸರ್ಕಲ್ ಬಳಿಯ ತಿರುಪತಿ ಕನ್ವೆನ್ಷನ್ ಹಾಲ್ನಲ್ಲಿ ಮಾಸಿಕ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿಸಿಪಿಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕೆಲಸ ಮಾಡುವ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಭಾಗವಾಗಿ ಜನಸ್ನೇಹಿ ಪೊಲೀಸ್ ಸಕ್ರಿಯಗೊಳಿಸಲು ನಗರದ ಪೊಲೀಸರು ಹೊಸ ವ್ಯವಸ್ಥೆಯೊಂದನ್ನು ಜಾರಿ ಮಾಡಿದ್ದರು. QR ಕೋಡ್ ಆಧಾರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ವ್ಯವಸ್ಥೆಯನ್ನು ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿತ್ತು.
ಸಾರ್ವಜನಿಕರು ಈ ಮೂಲಕ ನಮ್ಮ ಸೇವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮತ್ತು ಸರಳವಾಗಿ ತಂತ್ರಜ್ಞಾನ ಉಪಯೋಗಿಸಿ ನೀಡಬಹುದಾಗಿದೆ. ಇದರಿಂದ ನಾವು ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಉತ್ತಮಪಡಿಸಲು ಸಹಾಯವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಟ್ವೀಟ್ ಮಾಡಿದ್ದರು.