ರಾಮನಗರ ;– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶಂಕಿತ ಉಗ್ರರು ಪತ್ತೆ ಹಿನ್ನೆಲೆ ರಾಮನಗರದಲ್ಲಿ ASC ತಪಾಸಣೆಗೆ ಇಳಿದಿದೆ.
ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ
ರಾಮನಗರದಲ್ಲೂ ತಪಾಸಣೆ ನಡೆಸಲಾಗಿದ್ದು, ವಿದ್ವಾಂಸಕ ಕೃತ್ಯ ತಪಾಸಣಾ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ರಾಮನಗರ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಪ್ರಮುಖ ಕಚೇರಿಗಳನ್ನ ASC ತಂಡ ತಪಾಸಣೆ ಮಾಡುತ್ತಿದೆ.
ಪ್ರಮುಖ ಜಾಗಗಳಲ್ಲಿ ಇಂಚಿಂಚು ಜಾಗವನ್ನು ಪರಿಶೀಲನೆ ನಡೆಸುತ್ತಿದೆ. ಮುಂಜಾಗ್ರತಾ ಕ್ರಮ ಕೈಗೊಂಡಿರುವ ರಾಮನಗರ ಖಾಕಿ ಪಡೆ ಹಲವೆಡೆ ಪರಿಶೀಲನೆ ಮಾಡುತ್ತಿದೆ.