ಧಾರವಾಡ ;– ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಬಂಧನವಾಗಿರುವ ಉಗ್ರರನ್ನು ಅಮಾಯಕರಂತೆ ಕಾಂಗ್ರೆಸ್ ಬಿಂಬಿಸುತ್ತಿದೆ. ಇದಕ್ಕೆ ರಾಜ್ಯ ಗೃಹ ಮಂತ್ರಿಗಳ ಹೇಳಿಕೆಯೇ ಸಾಕ್ಷಿ. ಗೃಹ ಸಚಿವರು ಬಂಧಿತ ಉಗ್ರರರನ್ನು ಉಗ್ರರರು ಎಂದು ಹೇಳಲು ಆಗುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ಪುಷ್ಟೀಕರಣ ನೀತಿಯನ್ನು ಸ್ಪಷ್ಟವಾಗಿ ಮಾಡುತ್ತಿದೆ
ಕಾಂಗ್ರೆಸ್ನ ಈ ನೀತಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ಬರದಂತೆ ಮಾಡುತ್ತಿದೆ. ಕಾಂಗ್ರೆಸ್ನವರಿಗೆ ಒಂದು ಸೌಜನ್ಯತೆ ಇರಬೇಕು. ತನಿಖೆಗೆ ಮೊದಲೇ ಉಗ್ರರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿವುದು ಸರಿಯಲ್ಲ. ಈ ಸಾಪ್ಟ್ ಕಾರ್ನರ್ನಿಂದ ಮತ್ತಷ್ಟು ಉಗ್ರರು ಹುಟ್ಟಿಕೊಳ್ಳಲು ಅವಕಾಶ ನೀಡುತ್ತದೆ ಎಂದರು.
ಇನ್ನೂ ಭಜರಂಗದಳ ಕಾರ್ಯಕರ್ತರ ಗಡಿ ಪಾರು ವಿಚಾರವಾಗಿ ಮಾತನಾಡಿ, ಬಜರಂಗದಳದ ಕಾರ್ಯಕರ್ತರನ್ನು ಗಡಿಪಾರು ಮಾಡಲು ಕಾಂಗ್ರೆಸ್ನವರ ಬಳಿ ಏನು ಅಜೆಂಡಾ ಇದೆ. ಅಲ್ಪಸಂಖ್ಯಾತರ ಓಲೈಕೆಗೆ ಇಂತ ಕಾರ್ಯ ಮಾಡುತ್ತಿದೆ. ಓಲೈಕೆಗಾಗಿ ಯಾವ ಹಂತಕ್ಕಾದರೂ ಹೋಗುತ್ತೇವೆ ಎನ್ನುವುದಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ. ಇದಕ್ಕೆ ಈಗಿನ ಘಟನಾವಳಿಗಳೇ ಸಾಕ್ಷಿ. ಕಾಂಗ್ರೆಸ್ ಎಪಿಎಂಸಿ ಬಿಲ್ ವಾಪಸ್ ಪಡೆದುಕೊಂಡಿದೆ. ರೈತರಿಗೆ ಆದಾಯ ದ್ವಿಗುಣ ಮಾಡುವುದಕ್ಕೆ ನಾವು ಎಪಿಎಂಸಿ ಕಾಯ್ದೆ ಜಾರಿಗೆ ತಂದಿದ್ವಿ. ಈಗ ಅದನ್ನು ವಾಪಾಸ್ ಪಡೆಯಲಾಗಿದೆ
ಗೋಹತ್ಯೆ ನಿಷೇಧ ಕಾಯ್ದೆ ಸರಿಯಾಗಿದೆ ಆ ನಿಟ್ಟಿನಲ್ಲಿ ಕೆಲಸಗಳಾಗಬೇಕು ಎಂದರು. ಇನ್ನೂ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಬಂತೆಂದರೆ ಎಲ್ಲ ದರಗಳು ಏರಿಸುವ ಕೆಲಸ ಆಗುತ್ತದೆ. ಈ ಸರ್ಕಾರ ಬಂದ ನಂತರ ವಿದ್ಯುತ್ ಬಿಲ್ ಏರಿಕೆ ಮಾಡಿದೆ. ರಾಜ್ಯದ ಜನರಿಗೆ ಈ ಸರ್ಕಾರದಿಂದ ಬೆಲೆ ಏರಿಕೆ ಶಾಕ್ ಕೊಡುವ ಕೆಲಸ ಆಗಿದೆ. ಔದ್ಯೋಗಿಕರಣ, ಕೈಗಾರೀಕರಣಕ್ಕೆ ಈ ಸರ್ಕಾರ ದೊಡ್ಡ ಪೆಟ್ಟು ನೀಡಿದೆ. ನಿನ್ನೆ 3 ರೂಪಾಯಿ ನಂದಿನಿ ಹಾಲಿನ ದರವನ್ನು ಏರಿಸಿದ್ದಾರೆ. ಇನ್ನು ಮುಂದಿನ ದಿನದಲ್ಲಿ ಎಲ್ಲಾ ಬೆಲೆಗಳನ್ನು ಗಗನಕ್ಕೆ ತೆಗದುಕೊಂಡು ಹೋಗುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಲಿದೆ ಎಂದು ಟೀಕೆ ಮಾಡಿದರು.