ಶಿವಮೊಗ್ಗ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೆಸರಿನಲ್ಲಿ ಜೀವನ ಮಾಡುತ್ತಿರು ವಂತಹ ವ್ಯಕ್ತಿಗಳು. ಅವರು ಸಂವಿಧಾನಕ್ಕೆ ಕಟಿಬದ್ಧರಲ್ಲ. ಸಂವಿಧಾನಕ್ಕೆ ಗೌರವ ಕೊಡುವವರು ನಿಜ ಕಾಂಗ್ರೆಸ್ಸಿಗರು. ಅವರು ಈ ಹಿಂದೆ ಇದ್ದರು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ಹೇಳಿದ್ದಾರೆ. ರಾಜಕೀಯ ನಾಯಕ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳ ನಿಯೋಜನೆ ಹಾಗೂ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿರುವ ವಿಚಾರಕ್ಕೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು,
ಕಾಂಗ್ರೆಸ್ ನಾಯಕರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅಂಬೇಡ್ಕರ್ ಸಂವಿಧಾನವನ್ನು ಒಪ್ಪುವರು ಐಎಎಸ್ ಅಧಿಕಾರಿಗಳನ್ನು ಯಾವ ಲೆಕ್ಕಾಚಾರದ ಮೇಲೆ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಬಂದ ಆರೋಪಿಗಳನ್ನು ಆಹ್ವಾನ ಮಾಡಲು ಕಳಿಸಿದ್ದೀರಿ ಎಂದು ಪ್ರಶ್ನೆ ಮಾಡಿದರು. ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲು ಕಾನೂನು ಬದ್ಧವಾಗಿ ಅವಕಾಶ ಇದೆಯಾ? ಇದನ್ನು ಬಂಡತನದ ಕಾಂಗ್ರೆಸ್ ಕೇಳಲು ಸಾಧ್ಯವಿಲ್ಲ,
ಯಾಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಹೆಸರಿನಲ್ಲಿ ಜೀವನ ಮಾಡುತ್ತಿರುವಂತಹ ವ್ಯಕ್ತಿಗಳು. ಸಂವಿಧಾನಕ್ಕೆ ಗೌರವ ಕೊಡುವವರು ನಿಜ ಕಾಂಗ್ರೆಸ್ಸಿಗರು. ಅವರು ಈ ಹಿಂದೆ ಇದ್ದರು, ಅಂಬೇಡ್ಕರ್ಗೆ ಗೌರವ ಕೊಡುತ್ತಿದ್ದರು. ಅಂತವರಿಂದ ಮಾತ್ರ ಉತ್ತರ ನಿರೀಕ್ಷೆ ಮಾಡಲು ಸಾಧ್ಯವಿತ್ತು ಎಂದು ಕಿಡಿಕಾರಿದರು.