ಅಮರಾವತಿ: ಮುತ್ತು ಕೊಡುವ ವೇಳೆ ಗಂಡನ (Husband) ನಾಲಿಗೆಯನ್ನು ಪತ್ನಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಆಂಧ್ರಪ್ರದೇಶದ (Andhra Pradesh) ಕರ್ನೂಲ್ನಲ್ಲಿ (Kurnool) ನಡೆದಿದೆ. ಗಂಡನ ಮೇಲಿನ ಸಿಟ್ಟನ್ನು ಹೆಂಡತಿ (Wife) ಈ ರೀತಿ ವಿಚಿತ್ರವಾಗಿ ತೀರಿಸಿಕೊಂಡಿದ್ದಾಳೆ. ಈಗ ಇಬ್ಬರ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಆಂಧ್ರದ ಥಾರಚಂದ್ ನಾಯ್ಕ್ ಹಾಗೂ ಪುಷ್ಪಾವತಿ 2015ರಲ್ಲೇ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಯಲ್ಲಮ್ಮಗುಟ್ಟಾ ಥಂಡಾದಲ್ಲಿ ಇವರಿಬ್ಬರು ವಾಸವಾಗಿದ್ದರು. ಅನ್ಯೋನ್ಯವಾಗಿದ್ದ ಗಂಡ, ಹೆಂಡ್ತಿ ಮಧ್ಯೆ ಕಳೆದ ಎರಡು ವರ್ಷಗಳಿಂದ ಆಗಾಗ ಜಗಳಗಳು ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಹೆಂಡತಿ ಈ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ.
ಇತ್ತೀಚೆಗೆ ದಂಪತಿ ನಡುವೆ ಜೋರು ಜಗಳ ನಡೆದಿದೆ. ಈ ವೇಳೆ ಇವರಿಬ್ಬರ ಕಿತ್ತಾಟ ಇಡೀ ಬೀದಿಯ ಜನರಿಗೆಲ್ಲಾ ಕೇಳಿಸಿದೆ. ಸ್ವಲ್ಪ ಸಮಯದ ಬಳಿಕ ಇಬ್ಬರ ಕೋಪ ತಣ್ಣಗಾಗಿ ಜಗಳವೂ ನಿಂತಿದೆ. ಬಳಿಕ ಪತಿ ಪುಷ್ಪಾವತಿಗೆ ಮುತ್ತು ಕೊಡಲು ಹೋಗಿದ್ದಾನೆ. ಇದರಿಂದ ಕೋಪಗೊಂಡ ಪುಷ್ಪಾವತಿ ಪತಿಯ ನಾಲಿಗೆಯನ್ನು ರಕ್ತ ಬರುವ ಹಾಗೆ ಕಚ್ಚಿದ್ದಾಳೆ. ಇದರಿಂದ ಆತನ ನಾಲಿಗೆ ತೀವ್ರವಾಗಿ ಗಾಯಗೊಂಡಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಷ್ಟೆಲ್ಲಾ ಆದ ಮೇಲೆ ಪುಷ್ಪಾವತಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ನನ್ನ ಗಂಡ ನನ್ನಿಂದ ಬಲವಂತವಾಗಿ ಮುತ್ತು ಸ್ವೀಕರಿಸಲು ಯತ್ನಿಸಿದ. ಹೀಗಾಗಿ ನಾಲಿಗೆ ಕಚ್ಚಿದ್ದೇನೆ ಎಂದಿದ್ದಾಳೆ. ಪತಿ ಕೂಡ ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆಕೆಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾನೆ.