ಬೆಂಗಳೂರು: ಲೋಕಸಭಾ ಅಖಾಡಕ್ಕೆ ಕಮಲಪಡೆ ಭರ್ಜರಿ ತಯಾರಿ ನಡೆಸ್ತಿದೆ, ಕೇಂದ್ರ ಹೈಕಮಾಂಡ್ ಪ್ರತಿ ರಾಜ್ಯಗಳ ಸ್ಥಿತಿಗತಿಯ ಮಾಹಿತಿ ಕಲೆಹಾಕ್ತಿದ್ದು. ದಕ್ಷಿಣ ಭಾರತದ ಮೇಲೆ ಕಣ್ಣಿಟ್ಟಿರುವ ಕೇಸರಿ ನಾಯಕರು ಕರ್ನಾಟಕದಲ್ಲಿ ಹೆಚ್ಚು ಸೀಟ್ ಗೆಲ್ಲಲು ಪ್ಲಾನ್ ರೂಪಿಸ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪರನ್ನ ಬಿಟ್ಟು ನೆಲಕಚ್ಚಿದ್ದ ಬಿಜೆಪಿ ಹೈಕಮಾಂಡ್ ಇದೀಗ ರಾಜಹುಲಿಗೆ ರಾಜಾಧಿಪತ್ಯ ನೀಡಲು ಮುಂದಾಗಿದೆ. ವಿಜಯೇಂದ್ರ – ಅಮಿತ್ ಶಾ ಭೇಟಿ ಮೆಗಾ ಲೋಕಾ ಪ್ಲಾನ್ ಗೆ ವೇದಿಕೆಯಾಗಿದೆ..
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ನೆಲಕಚ್ಚಿದೆ. ಮಾಜಿ ಸಿಎಂ ಯಡಿಯೂರಪ್ಪ ಕಡೆಗಣನೆ, ಬಣ ರಾಜಕೀಯ, ಅಡ್ಜೆಸ್ಟೆಂಟ್ ಪಾಲಿಟಿಕ್ಸ್, ನಾಯಕತ್ವದ ಕೊರತೆ ಹೀಗೆ ಸಾಲು-ಸಾಲು ಕಾರಣಗಳು ಚುನಾವಣೆ ಸೋಲಿಗೆ ಕಮಲ ಪಡೆಯಲ್ಲಿ ಚರ್ಚೆಯಾಗ್ತಿದೆ. ಒಡೆದು 3 ಬಣಗಳಾಗಿರುವ ಬಿಜೆಪಿಗೆ ನಾಯಕತ್ವದ ಕೊರತೆಯದ್ದೇ ದೊಡ್ಡ ತಲೆನೋವಾಗಿದೆ. ಅದ್ರಲ್ಲೂ ಪ್ರಮುಖವಾಗಿ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ, ಲಿಂಗಾಯತರ ಮಾಸ್ ಲೀಡರ್, ರಾಜಾಹುಲಿ ಮಾಜಿ ಸಿಎಂ ಯಡಿಯೂರಪ್ಪ ರನ್ನ ಕಡೆಗಣನೆ ಮಾಡಿದ್ದೇ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಅನ್ನೋದು ಎಲ್ಲರಿಗೂ ನಿಧಾನವಾಗಿ ಅರ್ಥವಾಗ್ತಿದೆ. ಸದ್ಯ ವಿಪಕ್ಷ ನಾಯಕನಿಲ್ಲದೆ ಬಜೆಟ್ ಅಧಿವೇಶನವೂ ಮುಗಿದೋಯ್ತು, ರಾಜ್ಯಾಧ್ಯಕ್ಷರ ಅವಧಿ ಮುಗಿದ್ರು ಹೊಸ ಸಾರಥಿ ಆಯ್ಕೆ ಕಗ್ಗಂಟಾಗೆ ಉಳಿದೋಗಿದೆ. ಇತ್ತ 2024 ಲೋಕಸಭಾ ಚುನಾವಣೆ ಬೇರೆ ಹತ್ತಿರ ಬರ್ತಿದೆ ಈ ಹೆನ್ನೆಲೆಯಲ್ಲಿ ಕೇಸರಿ ಹೈಕಮಾಂಡ್ ರಾಜ್ಯದಲ್ಲಿ ಲೋಕಾ ಅಖಾಡ ಗೆಲ್ಲಲು ಮೆಗಾ ಪ್ಲಾನ್ ಮಾಡಿದೆ….
ಲೋಕಸಭೆಗೆ ಬಿಜೆಪಿ ಹೈಕಮಾಂಡ್ ತಯಾರಿ ಆರಂಭಿಸಿದ್ದು ದೇಶದ ಪ್ರತಿ ರಾಜ್ಯದಲ್ಲಿ ಬಿಜೆಪಿಯ ಸ್ಥಿತಿಗತಿ ಕುರಿತು ಮಾಹಿತಿ ಕಲೆಹಾಕುತ್ತಿದೆ. ದಕ್ಷಿಣ ಭಾರತ ಬಿಜೆಪಿಗೆ ಕಬ್ಬಿಣದ ಕಡಲೆ ಈ ಹಿನ್ನೆಲೆಯಲ್ಲಿ ದಕ್ಷಿಣದಲ್ಲಿ ಬಿಜೆಪಿ ಬೇರು ಗಟ್ಟಿಯಾಗಿರೊದೇ ಕರ್ನಾಟಕವನ್ನು ಟಾರ್ಗೆಟ್ ಮಾಡಿದೆ. ಯಡಿಯೂರಪ್ಪ ಇಲ್ಲದೇ ಕರ್ನಾಟಕದಲ್ಲಿ ಚುನಾವಣೆಗೆ ಗೆಲ್ಲೋದು ಕಷ್ಟ ಅನ್ನೋದು ಹೈಕಮಾಂಡ್ ಗೆ ಅರ್ಥವಾಗಿದೆ ಅದು ಕಳೆದ ವಿಧಾನ ಸಭಾ ಚುನಾವಣೆಯಲ್ಲೇ ಪ್ರೂವ್ ಆಗಿದೆ. ಬಿಜೆಪಿ ಹೈ ಕಮಾಂಡ್ ಗೆ ಯಡಿಯೂರಪ್ಪ ಅನಿವಾರ್ಯ ಹೀಗಾಗಿ
ಬಿಎಸ್ವೈ ಮುಂದಾಳತ್ವದಲ್ಲೇ ಲೋಕಸಭಾ ಚುನಾವಣೆ ನಡೆಸಲು ಹೈ ಕಮಾಂಡ್ ತೀರ್ಮಾನಿಸಿದೆ….
ಒಟ್ನಲ್ಲಿ ಮಾಸ್ ಲೀಡರ್ ಯಡಿಯೂರಪ್ಪರನ್ನ ಕಡೆಗಣಿಸಿ ಬುದ್ದಿ ಕಲಿತ ಬಿಜೆಪಿ ಹೈಕಮಾಂಡ್ ಇದೀಗ ರಾಜಾಹುಲಿಗೆ ಮತ್ತೆ ರಾಜಾತಿಥ್ಯ ನೀಡಲು ಮುಂದಾಗಿದೆ. ಬಿಎಸ್ವೈ ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟು ಯುವ ಶಕ್ತಿಯ ಜೊತೆ ರಾಜ್ಯದ ಅತೀ ದೊಡ್ಡ ಓಟ್ ಬ್ಯಾಂಕ್ ಲಿಂಗಾಯತ ಸಮುದಾಯವನ್ನು ಮತ್ತೆ ತಮ್ಮತ್ತ ಸೆಳೆಯಲು ಮೆಗಾ ಪ್ಲಾನ್ ಮಾಡ್ತಿದೆ ಕೇಸರಿ ಹೈಕಮಾಂಡ್. ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಎಂಬುದನ್ನ ಕಾದುನೋಡಬೇಕಿದೆ...
![Demo](https://prajatvkannada.com/wp-content/uploads/2023/08/new-Aston-Band.jpeg)