ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಹೋಯ್ತು ಎನ್ನುವಷ್ಟರಲ್ಲಿ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಸಿಎಂ ಸಿದ್ದು ವಿರುದ್ದ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಕೂಡ ಉಂಟಾಗಿತ್ತು. ಈ ನಡುವೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಎಂ ಸಿದ್ದು ವಿರುದ್ಧ ಬಿ ಕೆ ಹರಿಪ್ರಸಾದ್ ಅಸಮದಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಿ ಕೆ ಪರಿಪ್ರಸಾದ್ ಪರ ಬ್ಯಾಟ್ ಬೀಸಿದ್ದಾರೆ. ಅದು ಬೆಂಗಳೂರು ವರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಪುಮಾ ರೋಟೋ ಜಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದವರು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಇಲ್ಲ ಯಾವುದು ಇಲ್ಲ
ಬಿಕೆ ಹರಿಪ್ರಸಾದ್ ಜನರಲ್ಲಾಗಿ ಮಾತಾಡಿದಾರೆ ಅಷ್ಟೆ. ಹಿಂದೆ 20 ವರ್ಷ ಎಐಸಿಸಿ ಕಾರ್ಯದರ್ಶಿ ಆಗಿದ್ರು, ಆಗಬೇರೆ ಬೇರೆ ರಾಜ್ಯಗಳಿಗೆ ಹೋಗ್ತಾ ಇದ್ರಲ್ಲ. ಆ ವಿಚಾರವನ್ನ ಹೇಳಿದ್ದಾರೆ ಅಷ್ಟೆ. ಅದು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಅಲ್ಲ.ನಾನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಅವರ ಬಳಿ ಕೇಳಿ ತಿಳಿದುಕೊಳ್ಳುತ್ತೆನೆ. ಅವ್ರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ನಾವೆಲ್ಲರೂ ಅವರ ಜೊತೆಯಲ್ಲಿಯೇ ರಾಜಕೀಯಕ್ಕೆ ಬಂದವರು. ಪಕ್ಷಕ್ಕೆ ಹಾನಿಯಾಗುವ ಕೆಲಸ ಅವ್ರು ಮಾಡೊದಿಲ್ಲ ಎಂದು ಬಿಕೆ ಹರಿಪ್ರಸಾದ್ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರ ಮಾತನಾಡಿದ ಅವರು ಬಿಜೆಪಿಯವರು ನಡೆಯದ ನಾಣ್ಯ, ಚಲಾವಣೆಗೆ ಬರಬೇಕು ಅಂತಾ ಏನೇನೂ ಸರ್ಕಸ್ ಮಾಡ್ತಾ ಇದ್ದಾರೆ. ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಇದೇ ಅತಿಥಿಗಳು ಬಂದಿದ್ದರು. ಆಗಲು ಅಧಿಕಾರಿಗಳು ಅತಿಥಿಗಳ ಉಸ್ತುವಾರಿ ವಹಿಸಿದ್ದರು. ವಿದೇಶಿ ಅತಿಥಿಗಳಿಗೆ ಕೇಂದ್ರ ಸರ್ಕಾರ ಅಧಿಕಾರಿಗಳ ನಿಯೋಜಿಸಿದೆ. ಆದರೂ ಬಿಜೆಪಿಗರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)