ಕಂಪ್ಲಿ: ಕಂಪ್ಲಿ ತಾಲೂಕಿನ ಅಂಚೆ ಕಚೇರಿಯಲ್ಲಿ ಮಹಿಳೆಯರು ಸಂಬಳಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಚೆ ಕಚೇರಿಗೆ ಬೆಳಿಗ್ಗೆ 6:00ಗೆ ವೃದ್ದರು ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ, ಸಮಯ 11ಗಂಟೆ ಆದರೂ ಮಹಿಳೆಯರಿಗೆ ಸಂಬಳ ಸಿಗದೆ ಬೆಳಗಿನ ತಿಂಡಿಯನ್ನು ತಿನ್ನದೆ ಕೂರಲು ಸ್ಥಳವಿಲ್ಲದೆ ಬಳಲಿದ್ದಾರೆ. ಇಂದು ಅಂಚೆ ಕಚೇರಿ ಆವರಣದಲ್ಲಿ 120ಕ್ಕೂ ಹೆಚ್ಚು ಮಹಿಳೆಯರು ಕ್ಯೂ ನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು, ವಯೋವೃದ್ಧರಿಗೆ ಬಿಪಿ ಶುಗರ್ ಸರ್ವೇ ಸಾಮಾನ್ಯವಾಗಿದ್ದು, ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ನಿಲ್ಲಲು ಅವರು ಅಶಕ್ತರಾಗಿರುತ್ತಾರೆ. ಈ ಬಗ್ಗೆ ಅಂಚೆ ಕಚೇರಿಯ ಅಧಿಕಾರಿಗಳೂ ಸಹ ಕ್ಯಾರೇ ಅನ್ನದೆ ನಿರ್ಲಕ್ಷ ತೋರುತ್ತಿದ್ದಾರೆ.
ಪ್ರತಿ ತಿಂಗಳು ( ಮಹಿಳೆಯರು ಮತ್ತು ಪುರುಷ ) ವೃದ್ಧರು, ಅಂಚೆ ಕಚೇರಿಗೆ ಸಂಬಳ ಪಡೆಯುವುದಕ್ಕೆ ಬಂದರೆ ಅಂಚೆ ಅಧಿಕಾರಿಗಳ ತಿರಸ್ಕಾರಕ್ಕೆ ಈಡಾಗ್ತಾರೆ. 60 ವರ್ಷದ ವೃದ್ಧರಿಗೆ ಪೋಸ್ಟ್ ಮ್ಯಾನ್ ಗಳು ಪ್ರತಿ ತಿಂಗಳ ವೃದ್ದಾಪ್ಯ ವೇತನವನ್ನು ಮನೆಗೆ ಹೋಗಿ ತಲುಪಿಸುತ್ತಿಲ್ಲ. ಈ ಬಗ್ಗೆ ವೃದ್ಧರು ಪೋಸ್ಟ್ ಮ್ಯಾನ್ ಗಳಿಗೆ ಕೇಳಿದ್ರೆ ನೀವು ಅಂಚೆ ಕಚೇರಿಗೆ ಬಂದು ನಿಮ್ಮ ಸಂಬಳ ಪಡೆಯಿರಿ ಅಂತ ಪೋಸ್ಟ್ ಮ್ಯಾನ್ ಗಳು ಉಡಾಫೆ ಉತ್ತರ ಹೇಳುತ್ತಾರೆ. ಹಾಗಾಗಿ ಪೋಸ್ಟ್ ಮ್ಯಾನ್ ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ವೃದ್ಧ ಮಹಿಳೆಯರು ಆಕ್ರೋಶವನ್ನ ಹೊರ ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.