ಬೆಂಗಳೂರು ;- ಆಗಸ್ಟ್ 1ರಿಂದ ಹೊಟೇಲ್ ತಿಂಡಿ, ಕಾಫಿ, ಚಹಾಗಳ ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ಬೆಂಗಳೂರು ಹೊಟೇಲ್ಗಳ ಸಂಘ ತಿಳಿಸಿದೆ.
ಆಗಸ್ಟ್ 1ರಿಂದ ಹಾಲಿನ ದರವು ಹಚ್ಚಾಗಲಿದೆ. ಹೀಗಾಗಿ ಕಾಫಿ ಹಾಗೂ ಚಹಾ ಬೆಲೆ 2 ರಿಂದ 3 ರೂಪಾಯಿ ಹೆಚ್ಚಳವಾಗಲಿದೆ. ತಿಂಡಿಗಳ ದರ 5 ರೂ. ಹಾಗೂ ಊಟಕ್ಕೆ 10 ರೂ ಹೆಚ್ಚಳವಾಗಲಿದೆ. ಈ ಬಗ್ಗೆ ನಾಳೆ ಅಂದ್ರೆ ಮಂಗಳವಾರ ನಡೆಯುವ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತೆ ಅಂಥ ಸಂಘದ ಕಾರ್ಯದರ್ಶಿ ವಿರೇಂದ್ರ ಕಾಮತ್ ಹೇಳಿದ್ದಾರೆ. ಇತ್ತ ಈಗಾಗಲೇ ಕೆಲ ಹೊಟೇಲ್ಗಳಲ್ಲಿ ದರಗಳನ್ನ ಹೆಚ್ಚಿಸಲಾಗಿದೆ. ಅಧಿಕೃತವಾಗಿ ಆಗಸ್ಟ್ 1ರಿಂದ ದರಗಳಲ್ಲಿ ಹೆಚ್ಚಳವಾಗಲಿದೆ ಅಂತ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.