ಮೈಸೂರು ;- ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಜಂಗಲ್ ಲಾಡ್ಜ್ ನಲ್ಲಿ ರಿಯಾಯಿತಿ ಘೋಷಣೆ ಮಾಡಲಾಗಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.
ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಬಳಕೆ ಹೆಚ್ಚಳ ಉದ್ದೇಶದಿಂದ ಹಿರಿಯ ನಾಗರಿಕರು, ಪಿಯುಸಿ, ಬಿಎ, ಬಿಎಸ್ಸಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರಿಯಾಯಿತಿ ಪ್ಯಾಕೇಜ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೊರೋನಾದಿಂದಾಗಿ 2020 -21 ರಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಗಳಿಂದ 61 ಕೋಟಿ ರೂ. ವ್ಯವಹಾರ ನಡೆದಿತ್ತು. 2022-23ರಲ್ಲಿ 111 ಕೋಟಿ ರೂ. ವ್ಯವಹಾರ ನಡೆದಿದೆ. ಪ್ರಸ್ತುತ ದಾಖಲಾತಿ ಶೇ. 47 ರಷ್ಟು ಇದ್ದು, ದಾಖಲಾತಿಯನ್ನು 2024 ರೊಳಗೆ ಶೇಕಡ 75 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ರೆಸಾರ್ಟ್ ದರ ಹೆಚ್ಚಾಗಿರುವುದಿರಂದ ವಿಶೇಷ ಪ್ಯಾಕೇಜ್ ನೀಡದ ಕಾರಣ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ರಿಯಾಯಿತಿ ಪ್ಯಾಕೇಜ್ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉಕ್ಕಿ ಹರಿಯುವ ನದಿಯಲ್ಲಿ ಸೆಲ್ಫಿಗಾಗಿ ಯುವಕರ ಹುಚ್ಚಾಟ.. ವಿಡಿಯೋ ವೈರಲ್..!
![Demo](https://prajatvkannada.com/wp-content/uploads/2023/08/new-Aston-Band.jpeg)