ಆಂದ್ರ ;- ಅಪಾರ ಭಕ್ತಗಣವನ್ನು ಹೊಂದಿರುವ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ ಪ್ರತಿ ದಿನ ಕೋಟ್ಯಾಂತರ ರೂಪಾಯಿ ಆದಾಯಗಳಿಸುತ್ತಿದೆ.
ವಾರ್ಷಿಕವಾಗಿ 1500ಕೋಟಿಗೂ ಹಣ ಹುಂಡಿ ಎಣಿಕೆಯಲ್ಲೇ ಸಿಗುತ್ತಿದೆ. ಹಾಗಾಗಿ ತಿಮ್ಮಪ್ಪನ ಆದಾಯದ ಬಗ್ಗೆ ಕುತೂಹಲ ಮೂಡಬಹುದು. ಇದೀಗ ಸ್ವತಃ ಟಿಟಿಡಿ ಇಒ ಧರ್ಮಾರೆಡ್ಡಿ ಬಹಿರಂಗಪಡಿಸಿದ್ದಾರೆ.
ವಾರಣಾಸಿಯಲ್ಲಿ ನಡೆದ ಅಂತರಾಷ್ಟ್ರೀಯ ದೇಗುಲ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಧರ್ಮಾರೆಡ್ಡಿ, ತಿರುಮಲದ ಬಗ್ಗೆ ಹಲವು ಕೂತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ತಿಮ್ಮಪ್ಪನ ಬಳಿ ಇರುವ ಚಿನ್ನ, ಹಣ, ಪ್ರಸಾದ ವಿತರಣೆಗೆ ಬಳಸುವ ವಸ್ತುಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಟಿಟಿಡಿಯಲ್ಲಿ 24,500 ನೌಕರರಿದ್ದರೆ, 800 ಸಿಬ್ಬಂದಿ ದೇವಸ್ಥಾನದಲ್ಲಿ ಭಕ್ತರಿಗೆ ಸೇವೆ ಸಲ್ಲಿಸಲು ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಶ್ರೀವಾರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸಲು ವಾರ್ಷಿಕ 500 ಟನ್ ತುಪ್ಪವನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜೂನ್ ತಿಂಗಳು 23 ಲಕ್ಷ ಮಂದಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಪ್ರಕಟಿಸಿದೆ. ಜೂನ್ನಲ್ಲಿ ಸ್ವಾಮಿ ಹುಂಡಿಯ ಆದಾಯ 116.14 ಕೋಟಿ ಎಂದು ಹೇಳಿದೆ. ಕಳೆದ ತಿಂಗಳು 1.06 ಕೋಟಿ ಲಡ್ಡೂ ಮಾರಾಟವಾಗಿದೆ. 10 ಲಕ್ಷಕ್ಕೂ ಹೆಚ್ಚು ಭಕ್ತರು ಮುಡಿ ಅರ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಮಳೆಯಿಂದ ಆಸ್ತಿಪಾಸ್ತಿ ನಷ್ಟವಾಗದಂತೆ ಮುಂಜಾಗ್ರತಾ ಕ್ರಮ – ಕೃಷ್ಣ ಬೈರೇಗೌಡ!