ಇಂಡೋನೇಷ್ಯಾ: ಪೂರ್ವ ನುಸಾ ತೆಂಗರಾ ದ್ವೀಪದಲ್ಲಿ ಭೂಕಂಪ ಸಂಭವಿಸಿದ್ದು, 6.0 ತೀವ್ರತೆ ದಾಖಲಾಗಿದೆ ಎಂದು ಜಿಯೋಫಿಸಿಕ್ಸ್ ಏಜೆನ್ಸಿ ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು 75 ಕಿಲೋಮೀಟರ್ ಪೂರ್ವ ಇಂಡೋನೇಷ್ಯಾ ಪ್ರದೇಶದಲ್ಲಿ, ಟಿಮೋರ್ ಲೆಸ್ಟೆಗೆ ಸಮೀಪದಲ್ಲಿರುವ ಸಮುದ್ರದಲ್ಲಿದೆ ಎಂದು ಸಂಸ್ಥೆ ಹೇಳಿದೆ. ಭೂಕಂಪದಿಂದಾಗಿ ಈವರೆಗೆ ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.