ಇಡ್ಲಿ ಮತ್ತು ದೋಸೆಗೆ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ದರೆ ನೀವು ಗೆಣಸಿನ ಚಟ್ನಿಯನ್ನು ಟ್ರೈ ಮಾಡಬಹುದು. ಇದನ್ನು ಈ ಚಳಿಗಾಲದಲ್ಲಿ ಸವಿಯಲು ತುಂಬಾ ಚೆನ್ನಾಗಿರುತ್ತೆ ಮತ್ತು ದೇಹಕ್ಕೂ ಇಮ್ಯೂನಿಟಿ ಬೂಸ್ಟ್ ಮಾಡಲು ಸಹ ಹೆಚ್ಚು ಸಹಾಯಕರಿಯಾಗಿದೆ.
ಬೇಕಾಗುವ ಸಾಮಗ್ರಿಗಳು:
* ಮಧ್ಯಮ ಗಾತ್ರದ ಸಿಹಿ ಗೆಣಸು
* 2 ಚಮಚ ಉದ್ದಿನ ಬೆಳೆ
* 3-5 ಕೆಂಪು ಮೆಣಸಿನ ಕಾಯಿ
* ಸ್ವಲ್ಪ ಹುಣಸೆ ಹಣ್ಣು
* 4 ಚಮಚ ಕಾಯಿ ತುರಿ
* 2 ಚಮಚ ಎಣ್ಣೆ
ಒಗ್ಗರಣೆಗೆ ಒಂದು ಚಮಚ ಸಾಸಿವೆ, 1 ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವಿನ ಎಲೆ
ಮಾಡುವ ವಿಧಾನ:
* ಸಿಹಿ ಗೆಣಸನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ
* ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕೆಂಪು ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವು ಹಾಕಿ ಹುರಿಯಬೇಕು.
* ಉದ್ದಿನ ಬೆಳೆ ಗೋಲ್ಡನ್ ಬ್ರೌನ್ ಬಂದ ನಂತರ ಗ್ಯಾಸ್ ಆಫ್ ಮಾಡಿ
* ಇದು ತಣ್ಣಗಾದ ನಂತರ ಅದಕ್ಕೆ ಸಿಹಿ ಗೆಣಸು, ಉಪ್ಪು, ಕಾಯಿತುರಿ, ಹುಣಸೆ ಹಣ್ಣು, ಸ್ವಲ್ಪ ನೀರು ಹಾಕಿ ರುಬ್ಬಿ
* ಮತ್ತೆ ಬಾಣಲೆಗೆ ಎಣ್ಣೆಯಾಕಿ ಕಾದ ನಂತರ ಅದಕ್ಕೆ ಕರಿಬೇವು, ಮೆಣಸು, ಇಂಗು ಹಾಕಿ ರೆಡಿ ಮಾಡಿ ಅದನ್ನು ರುಬ್ಬಿದ ಚಟ್ನಿ ಮೇಲೆ ಹಾಕಿ ಅಲಂಕರಿಸಿದರೆ ಗೆಣಸಿನ ಚಟ್ನಿ ಸವಿಯಲು ಸಿದ್ಧವಾಗುತ್ತೆ.
ಗೆಣಸಿನ ಚಟ್ನಿಯ ಉಪಯೋಗಗಳು:
* ಗೆಣಸಿನಲ್ಲಿ ತೇವಾಂಶ ಶೇ.68.5, ಕಾರ್ಬೊಹೈಡ್ರೇಟ್ ಶೇ.28.2, ಕೊಬ್ಬು ಶೇ.0.3, ಪ್ರೋಟಿನ್ ಶೇ.1.2 ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆರೋಗ್ಯಕರವಾಗಿ ತೂಕ ಹೆಚ್ಚುತ್ತದೆ.
* ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.
* ಗರ್ಭಿಣಿಯರಿಗೆ ಬಹಳ ಆವಶ್ಯಕವಾದ ಬಿ-ವಿಟಾಮಿನ್ ಸೇರಿದಂತೆ ಪೋಲಿಕ್ ಆಸಿಡ್ ಗೆಣಸಿನಲ್ಲಿ ಹೇರಳವಾಗಿದೆ.
* ಇದರ ಸೇವನೆಯಿಂದ ಇಮ್ಯೂನಿಟಿ ಬೂಸ್ಟ್ ಆಗಿ, ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ.
* ಸಿಹಿ ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ನಿಂದ ನಮ್ಮನ್ನು ಕಾಪಾಡುತ್ತವೆ.
* ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ.
* ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.
ಇದನ್ನೂ ಓದಿ : DK Shivakumar; ಬೆಂಗಳೂರನ್ನು ಜಾಗತಿಕ ನಗರವಾಗಿ ಮಾಡಲು ಸರ್ಕಾರ ಬದ್ಧ – DCM ಡಿಕೆಶಿ