ಅನಾರೋಗ್ಯದ ಕಾರಣದಿಂದಾಗಿ ಸಿನಿಮಾ ರಂಗದಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡಿರುವ ನಟಿ ಸಮಂತಾ ಇದೀಗ ಬಾಲಿಗೆ ತೆರಳಿದ್ದಾರೆ.
ಕಳೆದ ಕೆಲ ದಿನಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ನಟಿ ಸಮಂತಾ ಇತ್ತೀಚೆಗೆ ಸದ್ಗುರು ಆಶ್ರಮದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಬಾಬ್ ಕಟ್ ಮಾಡಿಕೊಂಡು ಬಾಲಿಗೆ ಹಾರಿ ಇನ್ನೂ ಕೆಲವೇ ದಿನಗಳಲ್ಲಿ ಅಮೆರಿಕಾಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಮಂತಾ ಬಾಲಿಗೆ ತೆರಳಿದ್ದು ಅಲ್ಲಿನ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಹಂಚಿಕೊಂಡಿರುವ ಫೋಟೋದಲ್ಲಿ ಆಕೆ ಧರಿಸಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದ್ದು ಟೋಪಿಯ ಮೇಲೆ ‘ಡ್ರೀಮ್ಸ್ ಆನ್’ ಎಂದು ಬರೆಯಲಾಗಿದೆ. ಇನ್ನೂ ಸಮಂತಾ ಹಂಚಿಕೊಂಡಿರುವ ಫೋಟೋದಲ್ಲಿ ಅವರ ಮುಂಜಾನೆ ಹೇಗಿತ್ತು ಎಂಬುದನ್ನು ಕ್ಯಾಪ್ಶನ್ ಮೂಲಕ ವಿವರಿಸಿದ್ದಾರೆ.
ಸಮಂತಾ ಜೊತೆ ಅವರ ಫಿಟ್ನೆಸ್ ಟ್ರೇನರ್ ಅನುಷಾ ಸ್ವಾಮಿ ಕೂಡ ಬಾಲಿಗೆ ತೆರಳಿದ್ದಾರೆ. ಸಮಂತಾಗೆ ಅನುಷಾ ಸ್ವಾಮಿ ಜೊತೆ ಉತ್ತಮ ಬಾಂಡಿಂಗ್ ಇದ್ದು ಆಗಾಗ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸಮಂತಾ ಹಿಂದಿಯ ಸಿಟಾಡೆಲ್ ಹಾಗೂ ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದಾರೆ. ಎರಡು ಪ್ರಾಜೆಕ್ಟ್ನಲ್ಲೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್, ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಮನಸ್ಸಿನ ರಿಲ್ಯಾಕ್ಸ್ ಗಾಗಿ ಸಮಂತಾ ದೇವರು, ಧ್ಯಾನಗಳ ಮೊರೆ ಹೋಗಿದ್ದಾರೆ. ತಮ್ಮ ಆರೋಗ್ಯ ಕೊಂಚ ಮಟ್ಟಿಗೆ ಸುಧಾರಿಸಿದ ಬಳಿಕ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಲು ನಟಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.