ಕಳೆದ ಕೆಲ ದಿನಗಳಿಂದ ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾಕ್ ಸಮಯ ನಡೆಯುತ್ತಲೆ ಇದೆ. ಇದೀಗ ಈ ಪ್ರಕರಣಕ್ಕೆ ನಟ ಕಂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಎಂಟ್ರಿಕೊಟ್ಟಿದ್ದು ನಿರ್ಮಾಪಕ ಸೂರಪ್ಪ ಬಾಬು ಅವರನ್ನು ಎಳೆದು ತಂದಿದ್ದಾರೆ.
ಮೊನ್ನೆಯಷ್ಟೇ ವಿಡಿಯೋವೊಂದನ್ನು ಮಾಡಿ ಸೂರಪ್ಪ ಬಾಬು ಅವರನ್ನು ‘ಶಿಖಂಡಿ’ ಎಂದು ಕರೆದಿದ್ದರು ಚಂದ್ರಚೂಡ, ಇಂದು ಮತ್ತೆ ಮಾಧ್ಯಮ ಗೋಷ್ಠಿಯಲ್ಲಿ’ಸೂರಪ್ಪ ಬಾಬುಗೆ ನಮ್ಮ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಖಾಲಿ ಇದೆ. ಬೇಕಾದರೆ ಕೊಡುತ್ತೇನೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೂರಪ್ಪ ಬಾಬು ವಿಚಾರದಲ್ಲಿ ಮಾತನಾಡಿದ್ದ ನಿರ್ದೇಶಕ ಚಂದ್ರಚೂಡ ವಿಡಿಯೋವೊಂದನ್ನು ಮಾಡಿ ಅದನ್ನು ಯೂಟ್ಯೂಬ್ ನಲ್ಲಿ ಹರಿ ಬಿಟ್ಟಿದ್ದರು. ಅದರಲ್ಲಿ ಸೂರಪ್ಪ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಷ್ಟೇ ಅಲ್ಲದೆ ಅವರ ಫ್ಯಾಮಿಲಿಯನ್ನು ಎಳೆತಂದಿದ್ದರು. ಜೊತೆಗೆ ಬಾಬು ಮಗಳ ಬಗ್ಗೆಯೂ ಕೆಲವೊಂದಿಷ್ಟು ಮಾಹಿತಿಯನ್ನು ಆಚೆ ಹಾಕಿದ್ದು, ಇದು ಸೂರಪ್ಪ ಬಾಬು ಕೋಪಕ್ಕೆ ಕಾರಣವಾಗಿತ್ತು.
ಚಂದ್ರಚೂಡ್ ತಮ್ಮ ಬಗ್ಗೆ ಆರೋಪ ಮಾಡುತ್ತಿದ್ದಂತೆ ಮಾಧ್ಯಮಗೋಷ್ಠಿ ಮಾಡಿದ್ದ ಸೂರಪ್ಪ ಬಾಬು, ಚಂದ್ರಚೂಡ ಅವರ ವಿರುದ್ಧ ಹಲವಾರು ಆರೋಪ ಮಾಡಿದ್ದರು. ಚಂದ್ರಚೂಡ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದು, ಆತ ಯಾರು ಅಂತಾನೇ ತಮಗೆ ಗೊತ್ತಿಲ್ಲ. ಅವರಿಗೂ ಈ ವಿವಾದಕ್ಕೂ ಸಂಬಂಧವಿಲ್ಲ ಎಂದಿದ್ದರು.
ಸೂರಪ್ಪ ಬಾಬು ಮಾಧ್ಯಮಗೋಷ್ಠಿ ಮಾಡುತ್ತಿದ್ದಂತೆ ತಾನು ಕೂಡ ಪ್ರೆಸ್ ಮೀಟ್ ಕರೆದ ಚಂದ್ರಚೂಡ್, ಈ ವಿಚಾರದಲ್ಲಿ ಸುದೀಪ್ ಅವರ ಸುಮ್ಮನಿದ್ದರೂ ನಾನು ಸುಮ್ಮನಿರುವುದಿಲ್ಲ. ಸುದೀಪ್ ಅವರಿಗೆ ಸೂರಪ್ಪ ಬಾಬು ಆರು ಕೋಟಿ ರೂಪಾಯಿ ಕೊಡಬೇಕು. ಅಲ್ಲದೇ ಅಣ್ಣನಂತಿರುವ ಸುದೀಪ್ ಅವರ ಮನಸ್ಸಿಗೆ ಸೂರಪ್ಪ ಬಾಬು ಸಾಕಷ್ಟು ನೋವು ಕೊಟ್ಟಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ : ನಿಮ್ಮ ಇಮ್ಯೂನಿಟಿ ಬೂಸ್ಟ್ ಹೆಚ್ಚಿಸಲು ಗೆಣಸಿನ ಚಟ್ನಿ ಟ್ರೈ ಮಾಡಿ..!