ಪತಿಯ ಅಗಲಿಕೆಯ ನೋವು, ಮಗನ ಆರೈಕೆಯ ಕಾರಣದಿಂದಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಮೇಘನಾ ರಾಜ್ ನಟನೆಯ ತತ್ಸಮ ತದ್ಭವ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇದರ ನಡುವೆ ಇತ್ತೀಚಿನ ಸಂದರ್ಶನದಲ್ಲಿ ಮೇಘನಾ ರಾಜ್ ಅಚ್ಚರಿಯ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾರೆ.
ತತ್ಸಮ ತದ್ಭವ ಸಿನಿಮಾದಲ್ಲಿ ನಟಿ ಮೇಘನಾ ರಾಜ್ ಈ ಹಿಂದೆ ಎಂದೂ ಮಾಡಿದರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮ್ ಬ್ಯಾಕ್ ಸಿನಿಮಾ ಆಗಿರೋ ಕಾರಣ, ಸಿನಿಮಾ ಬಗ್ಗೆ ತುಂಬಾನೇ ಹೈಪ್ ಕ್ರಿಯೇಟ್ ಮಾಡಿದೆ. ಇದರ ಪತಿ ಚಿರು ಸರ್ಜಾ ನಟನೆಯ ‘ರಾಜ ಮಾರ್ತಾಂಡ’ ಸಿನಿಮಾ ಯಾಕೆ ತಡವಾಗುತ್ತಿದೆ ಎಂಬುದಕ್ಕೆ ಉತ್ತರ ನೀಡಿದ್ದಾರೆ.
ಚಿರಂಜೀವಿ ಸರ್ಜಾ ಕೊನೆದಾಗಿ ‘ರಾಜ ಮಾರ್ತಾಂಡ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಸರ್ಜಾ ಫ್ಯಾಮಿಲಿ ಭಾವನಾತ್ಮಕವಾಗಿ ಹತ್ತಿರವಾಗಿದೆ. ಧ್ರುವ ಸರ್ಜಾ ಚಿರು ಪಾತ್ರಕ್ಕೆ ಧ್ವನಿಯಾಗಿದ್ರೆ, ಪುತ್ರ ರಾಯನ್ ರಾಜ್ ಸರ್ಜಾ ಈ ಸಿನಿಮಾದ ಭಾಗವಾಗಿದ್ದಾರೆ. ರಾಯನ್ ಕೂಡ ತಂದೆಯ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಈ ಬಗ್ಗೆ ನಟಿ ಮೇಘನಾ ರಾಜ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಚಿರು- ಧ್ರುವಗೆ ಬಾಂಡಿಂಗ್ ತುಂಬಾನೇ ಚೆನ್ನಾಗಿತ್ತು. ಡಬ್ಬಿಂಗ್ ಮಾಡುವಾಗ ಧ್ರುವಗೆ ಸೀನ್ ನೋಡಿ ಡಬ್ ಮಾಡೋಕೆ ಕಷ್ಟವಾಗಿದೆ. ಸಿನಿಮಾ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ಸಮಯ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಧ್ರುವ ಸರ್ಜಾ ಇನ್ನೂ ಎಳಸು ಅಷ್ಟು ಶಕ್ತಿ ಇಲ್ಲ. ರಾಯನ್- ಅವನಿಗೂ ವ್ಯತ್ಯಾಸವಿಲ್ಲ ಎಂದು ಮೇಘನಾ ರಾಜ್ ಹೇಳಿದ್ದಾರೆ. ಸಿನಿಮಾ ಪ್ರಚಾರದಿಂದ ಹಿಡಿದು ರಿಲೀಸ್ ಆಗುವವರೆಗೂ ನನ್ನದು ಮತ್ತು ನನ್ನ ಕುಟುಂಬದ ಬೆಂಬಲವಿರುತ್ತದೆ ಎಂದಿದ್ದಾರೆ.