ಟ್ರಿನಿಡಾಡ್ (ವೆಸ್ಟ್ ಇಂಡೀಸ್): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯದ ಐದನೇ ಹಾಗೂ ಅಂತಿಮ ದಿನಕ್ಕೆ ಮಳೆ ಅಡ್ಡಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅಂತಿಮ ದಿನದಾಟದ ಸ್ವಲ್ಪ ತಡವಾಗಿದೆ. ಆರಂಭವಾಗಲಿದೆ.
ಭಾರತ ತಂಡ ನೀಡಿರುವ 365 ರನ್ ಗಳ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ವಿಕೆಟ್ ನಷ್ಟಕ್ಕೆ 76 ರನ್ಗಳನ್ನು ಕಲೆ ಹಾಕಿತ್ತು. ಇದೀಗ ಐದನೇ ದಿನವಾದ ಸೋಮವಾರ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 289 ರನ್ಗಳ ಅಗತ್ಯವಿದೆ. ಆದರೆ, ಭಾರತ ತಂಡಕ್ಕೆ ಸತತ ಎರಡನೇ ಗೆಲುವು ಪಡೆಯಲು 8 ವಿಕೆಟ್ಗಳನ್ನು ಪಡೆಯಬೇಕಾದ ಅಗತ್ಯವಿದೆ.
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 141 ರನ್ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಗೆದ್ದು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಐದನೇ ದಿನದ ಆರಂಭದಲ್ಲಿಯೂ ಮಳೆ ಆಟಕ್ಕೆ ಅಡ್ಡಿ ಉಂಟು ಮಾಡಿದೆ.
ಭಾರತ: ಪ್ರಥಮ ಇನಿಂಗ್ಸ್ 438-10 (ವಿರಾಟ್ ಕೊಹ್ಲಿ 121, ರೋಹಿತ್ ಶರ್ಮಾ 80, ರವೀಂದ್ರ ಜಡೇಜಾ 61, ಆರ್ ಅಶ್ವಿನ್ 56, ಯಶಸ್ವಿ ಜೈಸ್ವಾಲ್ 57; ಕೇಮರ್ ರೋಚ್ 104ಕ್ಕೆ 3, ಜೊಮೆಲ್ ವಾರಿಕನ್ 89 ಕ್ಕೆ 3)
ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 255-10 (ಕ್ರೇಗ್ ಬ್ರಾಥ್ವೇಟ್ 75, ಎಲಿಕ್ ಎಥನಾಝ್ 37, ತ್ಯಾಗಿ ನಾರಾಯಣ್ 33; ಮೊಹಮ್ಮದ್ ಸಿರಾಜ್ 60 ಕ್ಕೆ 5, ರವೀಂದ್ರ ಜಡೇಜಾ 37ಕ್ಕೆ 2)
ಇದನ್ನೂ ಓದಿ : ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್? : ಭಾರತ ಎ ತಂಡದ ಸೋಲಿನ ಬಳಿಕ ನೋಬಾಲ್ ವಿವಾದ ಸೃಷ್ಟಿ..!