ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಹಾಗೂ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಸಿನಿಮಾಗಳ ಜೊತೆ ಜೊತೆಗೆ ತಮ್ಮ ಮುದ್ದಾದ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾಗಳಿಂದ ಕೊಂಚ ಬಿಡುವು ಸಿಕ್ಕರೂ ಮಕ್ಕಳೊಂದಿಗೆ ನಟಿ ನಯನತಾರಾ ಸಮಯ ಕಳೆಯುತ್ತಿದ್ದು, ಇದೀಗ ಪತ್ನಿ ಮಕ್ಕಳೊಂದಿಗೆ ಆಡುತ್ತಿರುವ ಫೋಟೋವನ್ನು ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..
ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ಪುಟ್ಟ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದು, ಕಳೆದ ವರ್ಷದ ಹಿಂದೆ ಜೂನ್ 9ರಂದು ಮದುವೆಯಾದ ಕೆಲವೇ ತಿಂಗಳಲ್ಲಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆಯುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ.
ವಿಘ್ನೇಶ್ ಹಾಗೂ ನಯನತಾರಾ ತಮ್ಮ ಮಕ್ಕಳೊಂದಿಗೆ ಖುಷಿ ಜೀವನ ನಡೆಸುತ್ತಿದ್ದಾರೆ. ನಯನತಾರಾ ಮಕ್ಕಳೊಂದಿಗೆ ಇರುವಂತಹ ಕೆಲವು ಹೊಸ ಫೋಟೋಗಳನ್ನು ನಿರ್ದೇಶಕ ಶೇರ್ ಮಾಡಿದ್ದಾರೆ.
ತಾಯಿ-ಮಗು ಆಟವಾಡುತ್ತಿರುವ ಫೋಟೋವನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದು, ನನ್ನ ಎರಡು ಜೀವಗಳು ಎಂದು ಬರೆದುಕೊಂಡಿದ್ದಾರೆ.
ಮಕ್ಕಳಿಗೆ ಉಯಿರ್ ಮತ್ತು ಉಲಗ್ಗೆ ರುದ್ರೋನಿಲ್ ಮತ್ತು ದೈವಿಕ್ ಎಂದು ಹೆಸರಿಡಲಾಗಿದೆ. ಮಕ್ಕಳ ಹೆಸರನ್ನು ವಿಘ್ನೇಶ್ ಶಿವನ್ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಭಾರತ – ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ..!