ಬೆಳಗಾವಿ : ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿನ ಗೋಕಾಕ್ ಫಾಲ್ಸ್ ನೋಡಲು ಪ್ರವಾಸಿಗರಿಗೆ ನಿಷೇಧಸಲಾಗಿದ್ದು, ಪೊಲೀಸರಿಂದ ಬ್ಯಾರಿಕೇಡ್ ಹಾಕುವ ಮೂಲಕ ಬಂದೂಬಸ್ತ್ ಮಾಡಲಾಗಿದೆ.
ಬೆಳಗಾವಿಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಹಾಲಿನ ನೊರೆಯಂತೆ ಗೋಕಾಕ್ ಫಾಲ್ಸ್ ಮೈ ದುಂಬಿ ಹರಿಯುತ್ತಿದ್ದು, ನೋಡಲು ಬಂದ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಅಪಾಯದ ಅಂಚಿನಲ್ಲಿ ನಿಂತು ಯುವಕ ಯುವತಿಯರು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ.
ಪ್ರವಾಸಿಗರ ಹುಚ್ಚಾಟಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿಲ್ಲ. ಈ ಹಿನ್ನೆಲೆ ಗೋಕಾಕ್ ಫಾಲ್ಸ್ ಬಳಿ ಪೋಲಿಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಫಾಲ್ಸ್ ನೋಡಲು ಆಗಮಿಸುವ ಪ್ರವಾಸಿಗರಿಗೆ ಪೋಲಿಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಮಳೆಗಾಲ ಆರಂಭದ ಹಿನ್ನೆಲೆ ಗೋಕಾಕ್ ಫಾಲ್ಸ್ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಫೋಟೋ ಸೆಲ್ಫಿಗಾಗಿ ಮುಗಿಬೀಳುತ್ತಿರುವ ಕುರಿತು ಸುದ್ದಿ ಪ್ರಸಾರ ಮಾಡಿದ ಹಿನ್ನಲೆ ಪೋಲಿಸ್ ಇಲಾಖೆಯಿಂದ ಪ್ರವಾಸಿಗರಿಗೆ ಫಾಲ್ಸ್ ನೋಡಲು ನಿಷೇಧಿಸಲಾಗಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)