ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಬಿಜೆಪಿಯಿಂದ ಹೊರಬಂದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜ್ಯದಲ್ಲಿ ಇಂದು ಭಾರತೀಯ ಜನತಾ ಪಕ್ಷದ ಸ್ಥಿತಿ ಏನಾಗಿದೆ? ಬಿಜೆಪಿಗೆ ಓರ್ವ ವಿಪಕ್ಷ ನಾಯಕರನ್ನು ನೇಮಿಸಲು ಆಗ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ 66 ಸ್ಥಾನಗಳಿಗೆ ಕುಸಿದಿದ್ದಾರೆ.
ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ರು ಇನ್ನೂ ನೇಮಕ ಮಾಡ್ತಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಲೀಡರ್ಗಳೇ ಸಿಗ್ತಿಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು. ಯಾವ ಪಕ್ಷದಲ್ಲಿಯೂ ಸಿದ್ಧಾಂತ, ನೈತಿಕತೆ ಎಂಬುದು ಉಳಿದಿಲ್ಲ. ಬಿಜೆಪಿಯವರು ರೌಡಿಶೀಟರ್ಗಳನ್ನು ಎಲೆಕ್ಷನ್ಗೆ ನಿಲ್ಲಿಸುತ್ತಾರೆ. ಆ ಪಕ್ಷದಲ್ಲಿ ಏನ್ ನೈತಿಕತೆ ಉಳಿದಿದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಮದುವೆಯಾಗಿ ಆರೇ ತಿಂಗಳಿಗೆ ಪತ್ನಿ ಹತ್ಯೆಗೈದು ಪತಿಯ ಹೈಡ್ರಾಮ!