ರಾಯಚೂರು;- ಜಿಲ್ಲೆಯ ಮಾನ್ವಿ ಮತ್ತು ಸಿರವಾರ್ ತಾಲೂಕಿನ ಗ್ರಾಮ ಒನ್ ಸೇವೆಗಳ ಮೇಲೆ ತಹಶೀಲ್ದಾರ್ ದಾಳಿ ನಡೆಸಿದ್ದಾರೆ.
ಶುಲ್ಕ ರಹಿತ ಇರುವ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ 2 ರಿಂದ 300 ಜನರಿಂದ ಹಣ ಪಡೆಯುತ್ತಿರುವ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಹೀಗಾಗಿ ಸಿರವಾರ್ ಹಾಗೂ ಮಾನ್ವಿ ತಾಲೂಕಿನ ಮೂರು ಸೇವಾ ಕೇಂದ್ರಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಐಡಿ ಲಾಗ್ ಇನ್ ನಿಷ್ಕ್ರಿಯಗೊಳಿಸಲು ಐ ಡಿ ಸಿ ಎಸ್ ನಿರ್ದೇಶಕರಿಗೆ ರಾಯಚೂರು ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಸೇವ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. ಉಚಿತವಾಗಿರುವ ಸೇವೆಗಳಿಗೆ ಯಾರಾದ್ರೂ ಹಣ ಪಡೆದರೆ ಎಫ್ ಫೈಯರ್ ಮಾಡುವ ಮೂಲಕ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ : ಅಂಗವಿಕಲರಿಗೆ ಕೃತಕ ಕಾಲು ಜೋಡಣಾ ಶಿಬಿರ..!