ತುಮಕೂರು ;- ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತುಮಕೂರಿನ ಬನಶಂಕರಿ ಬಳಿ ವಾಸವಾಗಿರುವ ಸುಮಾರು 60 ಹಂದಿ ಜೋಗಿ ಕುಟುಂಬಗಳು ಒತ್ತಾಯ ಮಾಡಿದ್ದಾರೆ.
ಬಿಡಾರಗಳನ್ನ ನಿರ್ಮಿಸಿಕೊಂಡು ಈ ಕುಟುಂಬಗಳು ವಾಸವಿದ್ದು, ಕೂಲಿ ನಾಲಿ ಮಾಡಿಕೊಂಡು ವಾಸವಿರುವ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಒತ್ತಾಯ ಮಾಡಲಾಗಿದೆ.
20ಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದು ರಾತ್ರಿಯಲ್ಲಿ ಓದಲು ತೊಂದರೆ ಆಗ್ತಿದ್ದು, ದೀಪದ ಬೆಳಕಿನಲ್ಲಿ ಮಕ್ಕಳು ಓದುತ್ತಿರುವ ದೃಶ್ಯ ಸೆರೆಯಾಗಿದೆ. ಓದಲು ಕೂಡ ಸಮಸ್ಯೆ ಆಗ್ತಿದೆ ಹೀಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹಂದಿ ಜೋಗಿ ಕುಟುಂಬಗಳಿಂದ ಮನವಿ ಮಾಡಲಾಗಿದೆ.
ಇದನ್ನೂ ಓದಿ : ಸರ್ಕಾರದ ಆಡಳಿತ ಗೊಂದಲದ ಗೂಡಾಗಿದೆ – ಮಾಜಿ ಸ್ಪೀಕರ್ ಕಾಗೇರಿ