ಗದಗ;- ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಲವು ಗ್ರಾಮದ ಹತ್ತಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ, ನವೆಬಾವನೂರು, ತೆಗ್ಗಿನ ಭಾವನೂರು, ಮಂಚೂರು, ರಟ್ಟೂರು ಸೇರಿ ಹಲವು ಹಳ್ಳಿಗಳ ರೈತರು ಕಂಗಾಲಾಗಿದ್ದಾರೆ.
ನಿರಂತರ ಮಳೆಗೆ ಹತ್ತಿ ಬೆಳೆ ಕೊಳೆತು ಹೋಗುತ್ತಿದ್ದು, ಮಳೆ ಗಾಳಿಗೆ ಬಿಳಿ ಹತ್ತಿಕಾಯಿಗಳು ನೆಲಕ್ಕೆ ಉದುರಿಬಿದ್ದಿವೆ. ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರೋ ರೈತರ ನೆರವಿಗೆ ಬರಬೇಕು ಅಂತ ರೈತರು ಒತ್ತಾಯ ಮಾಡಿದ್ದಾರೆ. ಬಿಟ್ಟಿ ಭಾಗ್ಯಗಳನ್ನ ಕೊಡುವ ಬದಲು ರೈತರಿಗೆ ಸಹಾಯ ಮಾಡಿ ಅಂತ ಸಿಎಂಗೆ ರೈತರು ಮನವಿ ಮಾಡಿದ್ದಾರೆ. ಹತ್ತಿ ಬೆಳೆ ಅಷ್ಟೇ ಅಲ್ಲ, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿ ಹಲವು ಬೆಳೆ ಮಳೆಗೆ ಹಾನಿಯಾಗಿದೆ.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ರಾತ್ರಿಯಲ್ಲಿ ಓದಲು ತೊಂದರೆ ಆಗ್ತಿದ್ದು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹಂದಿ ಜೋಗಿ ಕುಟುಂಬಗಳಿಂದ ಒತ್ತಾಯ..!