ಅಮೆರಿಕ: ಯುನೈಟೆಡ್ ಸ್ಟೇಟ್ಸ್ನಲ್ಲಿ ಕೋವಿಡ್ -19ನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಕಡಿಮೆ ಮಾಡಿದ್ದಾರೆ. ತಮ್ಮ ಭಾಷಣದ ವೇಳೆ, ʻಸಾಂಕ್ರಾಮಿಕ ಕೋವಿಡ್ -19 ಕಾಣಿಸಿಕೊಂಡಾಗಿನಿಂದ ‘100 ಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದಾರೆʼ ಎಂದು ಅವರು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ COVID-19 ಕಾಣಿಸಿಕೊಂಡಾಗಿನಿಂದ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಮಾನಸಿಕ ಆರೋಗ್ಯ ರಕ್ಷಣೆಯ ಬೆಳವಣಿಗೆಗೆ ಹೊಸ ಕಾರ್ಯತಂತ್ರವನ್ನು ಘೋಷಿಸುವಾಗ, ಬೈಡನ್ ಈ ತಪ್ಪು ಮಾಹಿತಿ ನೀಡಿದ್ದಾರೆ. ನಂತ್ರ, ಅದನ್ನು ಅಂತಿಮವಾಗಿ ಅಧಿಕೃತ ಶ್ವೇತಭವನದ ಪ್ರತಿಲಿಪಿಯಲ್ಲಿ 1 ಮಿಲಿಯನ್ಗಿಂತಲೂ ಹೆಚ್ಚು ಎಂದು ಸರಿಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಆಲಿಕಲ್ಲು ಮಳೆಯಿಂದ ವಿಮಾನಕ್ಕೆ ಹಾನಿ: ತುರ್ತು ಲ್ಯಾಂಡಿಂಗ್