ಗ್ವಾಲಿಯರ್: ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯಕ್ಕೆ ತೆರಳಿ ತನ್ನ ಫೇಸ್ಬುಕ್ ಸ್ನೇಹಿತನನ್ನು ಭಾರತದ ಎರಡು ಮಕ್ಕಳ ತಾಯಿ ಅಂಜು ಮದುವೆಯಾಗಿದ್ದಾಳೆ. ಇದೀಗ ಆಕೆಯ ತಂದೆ ಪ್ರತಿಕ್ರಿಯೆ ನೀಡಿದ್ದು ಅಂಜು ನಮ್ಮ ಪಾಲಿಗೆ ಸತ್ತಂತೆ ಎಂದು ನೋವು ತೋಡಿಕೊಂಡಿದ್ದಾರೆ.
ಭಾರತದ ನಿವಾಸಿ ಅಂಜು ವಾಘಾ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದರು. ಅಂಜು ನೆರೆಯ ದೇಶದ ಖೈಬರ್ ಪಖ್ತುಂಖ್ವಾದಲ್ಲಿ ನೆಲೆಸಿರುವ ತನ್ನ ಪ್ರಿಯಕರ ನಸ್ರುಲ್ಲಾಗಾಗಿ ತಮ್ಮ ಧರ್ಮವನ್ನು ಬದಲಾವಣೆ ಮಾಡಿಕೊಂಡು ಬಳಿಕ ಆತನೊಂದಿಗೆ ಮದುವೆಯಾಗಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಇಸ್ಲಾಂ ಧರ್ಮಕ್ಕೆ ಮತಾಂರಗೊಂಡಿರುವ ಅಂಜು ಇದೀಗ ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾಳೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅಂಜು ತಂದೆ ಗಯಾ ಪ್ರಸಾದ್, ನನ್ನ ಮಗಳು ನೆರೆಯ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ತನ್ನ ಪ್ರಿಯಕರ ನಸ್ರುಲ್ಲಾಳನ್ನು ಮದುವೆಯಾಗಿದ್ದಾಳೆ ಎಂಬ ವಿಷಯ ಈಗಲೇ ಇಳಿಯಿತು. ಈ ಬಗ್ಗೆ ನನಗೆ ತಿಳಿದಿಲ್ಲ. ನಂತರ ಅಂಜು ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ವರದಿಗಳಿವೆ ಎಂದು ಕೇಳಲಾಯಿತು. ಈ ಬಗ್ಗೆ ಅಂಜು ತಂದೆ, ಅಂಜುಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಅಂಜು ಮೊದಲ ಮದುವೆ 2004-2005ರಲ್ಲಿ ನಡೆದಿತ್ತು ಎಂದು ತಂದೆ ತಿಳಿಸಿದ್ದಾರೆ. ಮದುವೆಯ ನಂತರ ನಾನು ಆಕೆಯ ಮನೆಗೆ ಹೋಗಿ ಬರುತ್ತಿದ್ದೆ. ಅಂಜು ಕೂಡ ತನ್ನ ಮಕ್ಕಳೊಂದಿಗೆ ಇಲ್ಲಿಗೆ ಬರುತ್ತಿದ್ದಳು ಎಂದಿದ್ದಾರೆ.