ಕೊಪ್ಪಳ: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ಅವರನ್ನು ಬದಲಾವಣೆ ಮಾಡುವ ಪ್ರಮೇಯವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ, ಕಾಂಗ್ರೆಸ್ ಶಾಸಕರ ಆಪರೇಷನ್ ಉಹಾಪೋಹವಷ್ಟೆ ಎಂದರು.
ಜನಸಂಘದಲ್ಲಿ ಲಿಂಗಾಯತ ನಾಯಕರಿದ್ದಿಲ್ಲ. ಆ ಕಾಲದಲ್ಲಿ ನಾವು ಸಂಘದಲ್ಲಿ ಇದ್ದೇವೆ. ಅದಕ್ಕೆ ಬೇಕಾಗುವಷ್ಟು ಕೆಲಸ ಮಾಡಿ ಹಿಂತಿರುಗಿಸಿದ್ದೇವೆ. ಮತ್ತೆ ಬಿಜೆಪಿಗೆ ಹೋಗುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಯಾವ ಪಕ್ಷದಲ್ಲಿ ತತ್ವ ಸಿದ್ದಾಂತ ಉಳಿದುಕೊಂಡಿದೆ. ಜನಸಂಘದ ತತ್ವ ಸಿದ್ದಾಂತ ಈಗಿನ ಬಿಜೆಪಿಯಲ್ಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಪ್ರಯತ್ನ ಮಾಡುತ್ತೇನೆ. ನನನ್ನು ಬಿಜೆಪಿ ಯಾವ ರೀತಿ ನಡೆಸಿಕೊಂಡರು ಎಂಬುದು ನಿಮಗೆಲ್ಲ ಗೊತ್ತಿದೆ. ಈಗ ಪ್ರೀತಿ ವಿಶ್ವಾಸದಿಂದ ಕಾಂಗ್ರೆಸ್ ನಡೆಸಿಕೊಳ್ಳುತ್ತಿದೆ. ಹಠಕ್ಕೆ ಬಿದ್ದು ಸೋಲಿಸಲು ಹೋಗಿ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡದಷ್ಟು ಶೋಚನಿಯ ಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು.
ನಾನು ಲೋಕಸಭೆಗೆ ಸ್ಪರ್ಧಿಸುವ ಕುರಿತು ಚರ್ಚೆಯಾಗಿಲ್ಲ. ಸಚಿವರ ವಿರುದ್ಧ ಶಾಸಕರ ಅಸಮಾಧಾನಕ್ಕೆ ಸಂಬಂಧಿಸಿದಂತೆ ಬಿಆರ್ ಪಾಟೀಲ ಎನ್ನಲಾಗುವ ಪತ್ರ ಫೇಕ್ ಎಂದು ಅವರೇ ತಿಳಿಸಿದ್ದಾರೆ. ಮಣಿಪುರ ಮಹಿಳೆ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಅಲ್ಲದೇ, ಅಲ್ಲಿಯ ಸರಕಾರ ಶಾಂತಿ ಕಾಪಾಡಲು ವಿಫಲವಾಗಿದೆ ಎಂದರು.
ಇದನ್ನೂ ಓದಿ : ತುಮಕೂರು ಜಿಲ್ಲೆಯಲ್ಲಿ ಮೌಡ್ಯಕ್ಕೆ ಬಲಿಯಾತ್ತು ಹಸುಗೂಸು..!