ಮಳೆಗಾಲದಲ್ಲಿ ಆಹಾರ ಕ್ರಮದ ಕಡೆ ತುಂಬಾನೇ ಗಮನಹರಿಸಬೇಕು, ಇಲ್ಲದಿದ್ದರೆ ಮಳೆಗಾಲ ಕಳೆಯುವಷ್ಟರಲ್ಲಿ ನಮ್ಮ ಮೈ ತೂಕ ಹೆಚ್ಚಾಗಿರುತ್ತದೆ ಹಾಗೆ ಇನ್ನು ಮಧುಮೇಹಿಗಳು, ಕೊಲೆಸ್ಟ್ರಾಲ್ ಇರುವವರು ಮಳೆಗಾಲದಲ್ಲಿ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಇಲ್ಲದಿದ್ರೆ ಆರೋಗ್ಯ ಕೆಡೋದು ಗ್ಯಾರಂಟಿ. ಹಾಗಾಗಿ ಇಲ್ಲಿದೆ ನೋಡಿ ಏನು ಸವಿದರೆ ಒಳ್ಳೆಯದು ಅಂತಾ!
ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಲು ಮಟ್ಟಾ ರೈಸ್ ಅಥವಾ ಕೆಂಪಕ್ಕಿ ಅನ್ನ ತುಂಬಾನೇ ಸಹಕಾರಿಯಾಗಿದೆ ನೋಡಿ. ಮಧುಮೇಹ ನಿಯಂತ್ರಣದಲ್ಲಿಡಬೇಕು, ಫಿಟ್ನೆಸ್ ಕಾಪಾಡಬೇಕೆಂದು ಬಯಸುವವರಿಗೆ ಈ ಮಟ್ಟಾ ರೈಸ್ ತುಂಬಾನೇ ಪ್ರಯೋಜನಕಾರಿ.
ಮಟ್ಟಾ ರೈಸ್ನಲ್ಲಿ ಪೋಷಕಾಂಶ ಅಧಿಕವಿದೆ:
ಇದನ್ನು ಪಾಲಿಷ್ ಮಾಡಿರುವುದಿಲ್ಲ, ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಖನಿಜಾಂಶ, ವಿಟಮಿನ್ಸ್ ಇದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಗ್ಲುಟೇನ್ ಫ್ರೀ :
ಇದರಲ್ಲಿ ಗ್ಲುಟೀನ್ ಅಂಶ ಇರುವುದಿಲ್ಲ. ಗ್ಲುಟೀನ್ ಫ್ರೀ ಆಹಾರ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಇದರ ಸೇವನೆಯಿಂದ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಇದು ತುಂಬಾನೇ ಸಹಕಾರಿಯಾಗಿದೆ.
ಮೆಗ್ನಿಷ್ಯಿಯಂ ಅತ್ಯಧಿಕವಿದೆ’ :
ಮೆಗ್ನಿಷ್ಯಿಯಂ ನಮ್ಮ ಆರೋಗ್ಯಕ್ಕೆ ಅವಶ್ಯಕವಿರುವ ಖನಿಜಾಂಶವಾಗಿದೆ. ಅರ್ಧ ಕಪ್ ಮಟ್ಟಾ ರೈಸ್ನಲ್ಲಿ 42ಗ್ರಾಂ ಮೆಗ್ನಿಷ್ಯಿಯಂ ಇರುತ್ತದೆ, ಇದರಿಂದ ಸಂಧಿವಾತ, ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕೆಲವೊಂದು ಕಾಯಿಲೆ ತಡೆಗಟ್ಟುತ್ತದೆ :
- ಇದನ್ನು ತಿನ್ನುವುದರಿಂದ ಮೈ ಬೊಜ್ಜು ತಡೆಗಟ್ಟಬಹುದು
- ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- ರಕ್ತನಾಳಗಳಲ್ಲಿ ಕೊಬ್ಬಿನಂಶ ಸಂಗ್ರಹವಾಗುವುದನ್ನು ತಡೆಗಟ್ಟಲು ಸಹಕಾರಿ.
ದೇಹಕ್ಕೆ ಅಗ್ಯತವಿರುವ ನಾರಿನಂಶ ಅಧಿಕವಿರುತ್ತದೆ :
ಮಟ್ಟಾ ರೈಸ್ನಲ್ಲಿ ಅಧಿಕ ನಾರಿನಂಶ ಇರುವುದರಿಂದ ಇದರ ಸೇವನೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದನ್ನು ಸ್ವಲ್ಪ ತಿಂದರೆ ಸಾಕು, ಬೇಗನೆ ಹೊಟ್ಟೆ ತುಂಬುವುದು. ಸ್ವಲ್ಪ ಮಟ್ಟರೈಸ್ ತಿನ್ನುವುದರಿಂದ ದಿನಕ್ಕೆ ಅವಶ್ಯಕವಿರುವ ನಾರಿನಂಶ ದೇಹಕ್ಕೆ ಸಿಗುತ್ತದೆ.
ಕ್ಯಾಲ್ಸಿಯಂ ಅಧಿಕವಿರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು :
ಇದರಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ಸಂಧಿವಾತದ ಸಮಸ್ಯೆ ತಡೆಗಟ್ಟಲು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಹೇಗೆ..?