ತುಮಕೂರು ;- ಮತ್ತೊಮ್ಮೆ ಬಡ ವ್ಯಕ್ತಿಗೆ ಉಚಿತ ಆಪರೇಷನ್ ಮಾಡಿ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಮಾನವೀಯತೆ ಮೆರೆದಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ವ್ಯಕ್ತಿಗೆ ಫ್ರೀ ಆಪರೇಷನ್ ಮಾಡಿ ಡಾ.ರಂಗನಾಥ್ ಮಾದರಿ ಆಗಿದ್ದಾರೆ.
ಚಿಕಿತ್ಸೆಗೆ ಹಣವಿಲ್ಲದೆ ಸಹಾಯ ಕೋರಿ ಶಿವನಂಜಯ್ಯ ಅವರು ಶಾಸಕರ ಬಳಿ ಬಂದಿದ್ದರು. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಅವರು, ಹಲವಾರು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದರು.
ಆದರೆ ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಹೀಗಾಗಿ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿ ಶಾಸಕರ ಬಳಿ ಶಿವನಂಜಯ್ಯ ಹೋಗಿದ್ದ.
ಬಡ ವ್ಯಕ್ತಿಯ ಮನವಿಗೆ ತಕ್ಷಣವೇ ಶಾಸಕರು ಸ್ಪಂದಿಸಿದರು. ಸ್ವತಃ ವೈದ್ಯರಾಗಿರೋ ಡಾ. ರಂಗನಾಥ್ ಅವರು, ತಾವೇ ಖುದ್ದು ಆಪರೇಷನ್ ಮಾಡಲು ಮುಂದಾದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇನ್ನೂ ಈ ಹಿಂದೆಯೂ ಕೂಡ ಬಡ ಮಹಿಳೆಯೊಬ್ಬಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿ ರಂಗನಾಥ್ ಅವರು ಮಾದರಿ ಆಗಿದ್ದರು.