ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಗಳಲ್ಲಿ ಒಂದಾಗ ಗೃಹಜ್ಯೋತಿ ಸ್ಕೀಂ ಕೂಡ ಒಂದು . ಜುಲೈ ತಿಂಗಳ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದೆ. ಇಂದು ಅರ್ಜಿ ಸಲ್ಲಿಸದಿದ್ದರೆ ಜುಲೈ ತಿಂಗಳಲ್ಲಿ ಉಚಿತ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ.
ಜುಲೈ 27ರ ಒಳಗಾಗಿ ವಿದ್ಯುತ್ ಉಚಿತ ಪಡೆಯಲು ನೋಂದಣಿ ಮಾಡಬೇಕು. ಇದಕ್ಕಾಗಿ ಯಾವುದೇ ಕಾಲವಕಾಶದ ಮಿತಿ ಇಲ್ಲ. ಈವರೆಗೆ ಸುಮಾರು 1 ಕೋಟಿ 20 ಲಕ್ಷ ಜನರಿಂದ ನೋಂದಣಿ. ಮಾಡಿದ್ದಾರೆ. ಈ ಪೈಕಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 50 ಲಕ್ಷ ಮಂದಿಯಿಂದ ನೋಂದಣಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆಯೇ, ಈ ತಿಂಗಳ ವಿದ್ಯುತ್ ಉಚಿತ ಪಡೆಯಲು ಇಂದು ಸಂಜೆಯೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಂದಾಜು ರಾಜ್ಯದಲ್ಲಿ 1 ಕೋಟಿ 22 ಲಕ್ಷ ಬಳಕೆದಾರರಿಗೆ ಮಾತ್ರ ಜುಲೈ ತಿಂಗಳ ವಿದ್ಯುತ್ ಉಚಿತ ಸಿಗಲಿದೆ.
ನಾಳೆಯಿಂದ ಗೃಹಜ್ಯೋತಿಗೆ ನೋಂದಣಿ ಮಾಡಿದರೆ ಅಗಸ್ಟ್ ತಿಂಗಳ ವಿದ್ಯುತ್ ಉಚಿತವಾಗಿ ಲಭ್ಯವಾಗಲಿದೆ. ಜನರು ಸೆಪ್ಟೆಂಬರ್ ನಲ್ಲಿ ಬರುವ ಆಗಸ್ಟ್ ತಿಂಗಳ ಉಚಿತ ವಿದ್ಯುತ್ ಅನ್ನು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ.