ಬಿಜೆಪಿ ಹಿರಿಯ ಶಾಸಕರು, ಹಾಗೂ ಮಾಜಿ ಮಂತ್ರಿಗಳಾದ ಸುನಿಲ್ ಕುಮಾರ್ ವಿರುದ್ದ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಹಿರಿಯ ನಾಯಕರಾದ T A ಶರವಣ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಹಿರಿಯ ಶಾಸಕರು, ಮಾಜಿ ಮಂತ್ರಿಗಳಾದ ಸುನಿಲ್ ಕುಮಾರ್ ಅವರು ಇತ್ತಿಚಿಗೆ ಜೆಡಿಎಸ್ ಬಗ್ಗೆ ತಿರಸ್ಕಾರ ಭಾವ ಬರುವ ರೀತಿ ಖಾಸಗಿ ಪತ್ರಿಕಾ ಸಂದರ್ಶನ ಮತ್ತು ಟ್ವಿಟರನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕುರಿತು ಮಾತನಾಡಿದ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಹಿರಿಯ ನಾಯಕರಾದ T A ಶರವಣ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ನಾಯಕತ್ವದ ಬಗ್ಗೆ ಮಾತಾಡಲು ಇವರು ಯಾರು? ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶರಣಾದ ಬಿಜೆಪಿಯಲ್ಲಿ ನಾಯಕರು ಯಾರಿದ್ದಾರೆ?. ಇವರ ಯೋಗ್ಯತೆಗೆ ಸಮರ್ಥ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬಜೆಟ್ ಅಧಿವೇಶನ, ರಾಜ್ಯಪಾಲರ ಭಾಷಣ ಪ್ರತಿಪಕ್ಷ ನಾಯಕರೇ ಇಲ್ಲದೆ ನಡೆದು, ಸಂಸದೀಯ ಇತಿಹಾಸದಲ್ಲೇ ಕೆಟ್ಟ ಪರಂಪರೆಗೆ ನಾಂದಿ ಹಾಡಿದ ಪಕ್ಷ ಬಿಜೆಪಿ. ಇಂಥ ಪಕ್ಷದ ನಾಯಕರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ?
ಇನ್ನು ಜೆಡಿಎಸ್ ಅನಿವಾರ್ಯ ಅಲ್ಲ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ. ಒಂದು ಮಾತಂತೂ ಸತ್ಯ. ಯಾರಿಗೂ ಯಾರು ಅನಿವಾರ್ಯ ಅಲ್ಲ. ತಮ್ಮ ಇತಿಮಿತಿ ಅರಿತು ನಡೆದರೆ, ವರ್ತಿಸಿದರೆ ಬಿಜೆಪಿಗೆ ಒಳಿತು. ಸೋತು ನೆಲಕಚ್ಚಿದರೂ ಸುನಿಲ್ ಕುಮಾರ್ ರಂತ ಬಿಜೆಪಿ ನಾಯಕರಿಗೆ ಇನ್ನೂ ಬುದ್ದಿ ಬಂದಿಲ್ಲ ಎನ್ನುವುದೇ ವಿಷಾದಕರ ಎಂದು T A ಶರವಣ ಅಕ್ರೋಶ ವ್ಯಕ್ತಪಡಿಸಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)