ಧಾರವಾಡ ;- ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಟ್ಟಡ ಶಿಥಿಲಗೊಂಡ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದಕ್ಕೆ ಸಾಕ್ಷಿ ಎಂಬುವಂತೆ ಹುಬ್ಬಳ್ಳಿ ತಾಲೂಕಿನ ಹೆಬಸೂರಿನ ಹೆಣ್ಣು ಮಕ್ಕಳ ಮಾದರಿಯ ಶಾಲೆಯಲ್ಲಿ ಇಂತಹದೊಂದು ಪರಿಸ್ಥಿತಿ ಗೋಚರಿಸುತ್ತಿದೆ.
ಹೌದು.. ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಶಾಲಾ ಕಟ್ಟಡಗಳು ವಿಶೇಷವಾಗಿ ತರಗತಿ ಕೋಣೆಗಳ ಮೇಲ್ಛಾವಣಿಗಳು ಸೋರುತ್ತಿದ್ದು, ಕೆಲವು ಕಟ್ಟಡಗಳು ಸಿಥಿಲಗೊಂಡಿದ್ದು, ಇಂಥ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಎಸ್.ಡಿ.ಎಮ್.ಸಿ.ಪದಾಧಿಕಾರಿಗಳು ನಿತ್ಯದ ಎಲ್ಲ ಚಟುವಟಿಕೆಗಳನ್ನು ಬದಿಗಿಟ್ಟು ಖುದ್ದಾಗಿ ಪರಿಶೀಲಿಸಿ ಫೋಟೋ ವಿಡಿಯೋ ಸಹಿತ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆಗೆ ಸ್ಥಳೀಯ ಸಂಸ್ಥೆಗಳಿಗೆ ಲಿಖಿತ ವರದಿ ಸಲ್ಲಿಸುತ್ತಿದ್ದಾರೆ.
ಆದರೆ ನೆಪ ಮಾತ್ರಕ್ಕೆ ಎಂಬುವಂತೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ ವಿನಃ ಮತ್ತೇ ಮಳೆಗಾಲದ ಅವಧಿಯಲ್ಲಿಯೇ ಭೇಟಿ ನೀಡುತ್ತಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)