ಮನಿಲಾ (ಫಿಲಿಪ್ಪೀನ್): ಫಿಲಿಪೈನ್ಸ್ನ ಸರೋವರದಲ್ಲಿ ಪ್ರಯಾಣಿಕರಿದ್ದ ದೋಣಿ ಮುಳುಗಿ 30 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 40 ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
MBCA ಪ್ರಿನ್ಸೆಸ್ ಅಯಾ ಬಿನಾಂಗೊನಾನ್ನ ಬರಾಂಗೇ ಕಲಿನಾವನ್ನಿಂದ ಸುಮಾರು 50 ಗಜಗಳಷ್ಟು ದೂರದಲ್ಲಿ ಪ್ರಯಾಣಿಕರಿದ್ದ ದೋಣಿ ಮಗುಚಿ ಬಿದ್ದಿದೆ ಎಂದು ಫಿಲಿಪೈನ್ ಕೋಸ್ಟ್ ಗಾರ್ಡ್ (PCG) ತಿಳಿಸಿದೆ.
ಏಜೆನ್ಸಿಯ ಪ್ರಕಾರ, ಈ ಘಟನೆಯು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸಂಭವಿಸಿದ್ದು, ಬಲವಾದ ಗಾಳಿಯಿಂದ ಯಾಂತ್ರಿಕೃತ ದೋಣಿಯು ಜರ್ಜರಿತವಾದಾಗ ಭಯಭೀತರಾದ ಪ್ರಯಾಣಕರು ಒಂದೆಡೆ ಗುಂಪುಗೂಡಿದರು, ಇದರಿಂದಾಗಿ ದೋಣಿ ಮಗುಚಿದೆ ಎಂದು ತಿಳಿದುಬಂದಿದೆ.ಘಟನಾ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.