ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದಲ್ಲಿ ಸರಿಯಾಗಿ ಬಸ್ ಬರದೇ ಇರುವುದು ಸೇರಿದಂತೆ ಶಾಲಾ ಮಕ್ಕಳ ಸಮಸ್ಯೆಗಳನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಶುಕ್ರವಾರ ಆಲಿಸಿದರು. ನಮಗೆ ಸಮಯಕ್ಕೆ ಸರಿಯಾಗಿ ಬಸ್ ಬರಲ್ಲ ಬಂದರೂ ಬಸ್ ತುಂಬಾ ತುಂಬಿರುತ್ತೇವೆ ಆದ್ದರಿಂದ ಶಾಲೆಗೆ ಹೋಗಲು ತೊಂದರೆ ಆಗುತ್ತದೆ̤
ಇದರ ಜೊತೆಗೆ ಸರಿಯಾಗಿ ರಸ್ತೆ ಇಲ್ಲಾ ದುರಸ್ತಿ ಮಾಡಿಸಲು ಸಚಿವ ಸಂತೋಷ ಲಾಡ್ ಬಳಿ ಮನವಿ ಮಾಡಿದರು. ಮನವಿ ಆಲಿಸುವ ಜೊತೆಗೆ ತಕ್ಷಣ ಸಾರಿಗೆ ಅಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಸರಿಯಾಗಿ ಬಸ್ ವ್ಯವಸ್ಥೆಗೆ ಸೂಚಿದರು. ಶಾಸಕ ಎಂ ಆರ್ ಪಾಟೀಲ್ , ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು