ಹುಬ್ಬಳ್ಳಿ ;– ಶಾಸಕಾಂಗ ಸಭೆಯಲ್ಲಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಭೆಯಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದಿದ್ದಾರೆ. ಸರ್ಕಾರ ಬಂದು ಎರಡು ತಿಂಗಳಷ್ಟೇ ಆಗಿದೆ. ಅನುದಾನದ ಕುರಿತು ಒಂದು, ಎರಡು ಶಾಸಕರಿಗೆ ಅಸಮಾಧಾನ ಆಗಿರಬಹುದು. ಶಾಸಕರು ಹೇಳಿರುವ ಕೆಲಸವನ್ನು ಸಚಿವರು ಹಾಗೂ ಮುಖ್ಯಮಂತ್ರಿ ಸಾಮಾನ್ಯವಾಗಿ ಮಾಡಿಯೇ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು. ಬಿಜೆಪಿ ಸರ್ಕಾರದ ಕೊನೆಯಲ್ಲಿ ಮಿತಿ ಮೀರಿ ಟೆಂಡರ್ ಕರೆಯಲಾಗಿದೆ. ಅವುಗಳಲ್ಲಿ ಯಾವುದು ಕೆಲಸ ಆರಂಭವಾಗಿಲ್ಲ ಎಂದು ಪರಿಶೀಲನೆ ನಡೆಸಿ, ಆದ್ಯತೆ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು. ಕಾಮಗಾರಿ ಆರಂಭಿಸುವ ಗುತ್ತಿಗೆದಾರರಿಗೆ ತಕ್ಷಣ ಬಿಲ್ ಪಾವತಿಸಲಾಗುವುದು ಎಂದರು.
![Demo](https://prajatvkannada.com/wp-content/uploads/2023/08/new-Aston-Band.jpeg)