ಬೆಂಗಳೂರು ;- ಯುವಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅತಿ ಅವಶ್ಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಶ್ವ ಹೆಪಟೈಟಿಸ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಪಟೈಟಿಸ್ ಸೋಂಕು ಆಹಾರ ಮತ್ತು ಜೀವನಶೈಲಿಯಲ್ಲಿ ಆಗುವ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗದಲ್ಲಿ ಲಿವರ್ಗೆ ನಾವು ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. ಲಿವರ್ನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ, ಅದು ನಮಗೆ ಅಷ್ಟೇ ಉತ್ತಮ ಆರೋಗ್ಯವನ್ನು ನೀಡುವಂತಹ ಒಂದು ಅಂಗಾಂಗವಾಗಿದೆ ಎಂದರು.
ಮಾನವನ ದೇಹದಲ್ಲಿ ಲಿವರ್ 500 ಕ್ಕೂ ಹೆಚ್ವು ಕಾರ್ಯವನ್ನು ಮಾಡುವ ಪ್ರಮುಖ ಅಂಗಾಂಗ. ಎ, ಬಿ, ಸಿ, ಡಿ ಮತ್ತು ಇ ರೀತಿಯ ಹೆಪಟೈಟಿಸ್ ವೈರಸ್ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಬಿ ಮತ್ತು ಸಿ ವೈರಸ್ ಲಿವರ್ ಡ್ಯಾಮೇಜ್ ಮಾಡುವ ವೈರಸ್ ಗಳಾಗಿದ್ದು, ಮಾರಕ ಕಾಯಿಲೆಯನ್ನು ಉಂಟುಮಾಡುತ್ತವೆ ಎಂದು ಸಚಿವರು ಹೇಳಿದರು.
ಹೆಪಟೈಟಿಸ್ ವೈರಸ್ ನಿಂದಾಗಿ ದೇಶದಲ್ಲಿ 3.5 ಕೋಟಿಗೂ ಹೆಚ್ಚು ಜನರು ಇಂದು ಲಿವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಕರ್ನಾಟದಲ್ಲಿ ಶೇ. 1 ರಷ್ಟು ಹೆಪಟೈಟಿಸ್ ಸೋಂಕು ಕಂಡು ಬಂದಿದೆ. 2030 ರೊಳಗೆ ಹೆಪಟೈಟಿಸ್ ಸಿ ವೈರಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಹೆಪಟೈಟಿಸ್ ಬಿ ವೈರಸ್ ಅನ್ನು ಕೂಡಾ ನಿಯಂತ್ರಣದಲ್ಲಿಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
![Demo](https://prajatvkannada.com/wp-content/uploads/2023/08/new-Aston-Band.jpeg)