ಬೆಂಗಳೂರು ;- 2023ನೇ ಸಾಲಿನ ಎಫ್ಎಂಸಿಜಿ ಬ್ರ್ಯಾಂಡ್ ರ್ಯಾಂಕಿಂಗ್ ನಲ್ಲಿ ಸಹಕಾರಿ ಹಾಲು ಮಾರಾಟ ಮಹಾಮಂಡಲದ ಡೈರಿ ಬ್ರ್ಯಾಂಡ್ ನಂದಿನಿ 6ನೇ ಸ್ಥಾನಕ್ಕೆ ಏರಿದೆ.
2022ರಲ್ಲಿ 7ನೇ ಸ್ಥಾನದಲ್ಲಿದ್ದ ನಂದಿನಿ ಬ್ರ್ಯಾಂಡ್ ಈ ವರ್ಷ ಒಂದು ಸ್ಥಾನ ಮೇಲೆರಿದೆ. ಇನ್ನು 2022ರಲ್ಲಿ 2ನೇ ಸ್ಥಾನದಲ್ಲಿದ್ದ ಗುಜರಾತ್ ನ ಅಮೂಲ್ ಈ ವರ್ಷ 3ನೇ ಸ್ಥಾನಕ್ಕೆ ಕುಸಿದಿದೆ. ಬ್ರ್ಯಾಂಡ್ ಫುಟ್ ಪ್ರಿಂಟ್ ಎಂಬ ಬ್ರ್ಯಾಂಡ್ ರ್ಯಾಂಕಿಂಗ್ ಲಿಸ್ಟ್ ನ್ನು ಲಂಡನ್ ಮೂಲದ ಮಾರುಕಟ್ಟೆಯ ಸಂಶೋಧನಾ ಕಾಂತಾರ್ ವರ್ಲ್ಡ್ ಪ್ರಕಟಿಸಿದೆ.