ಬೆಂಗಳೂರು: ನಟ, ನಿರ್ಮಾಪಕ ಜೈ ಜಗದೀಶ್ ಹಾಗೂ ನಟಿ, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ದಂಪತಿಯ ಹಿರಿಯ ಪುತ್ರಿ ವೈಭವಿ. ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ, ನಟಿಯಾಗಿ ಗುರುತಿಸಿಕೊಂಡಿರುವ ವೈಭವಿ ಜಗದೀಶ್ ಈಗ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಆಚರಣೆಗಾಗಿ ವೈಭವಿ ಜಗದೀಶ್ ದುಬೈಗೆ ಹಾರಿದ್ದರು.
ದುಬೈನ ಬುರ್ಜ್ ಖಲೀಫಾದಲ್ಲಿ ವೈಭವಿ ಜಗದೀಶ್ ತಮ್ಮ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ತಾಯಿ ವಿಜಯಲಕ್ಷ್ಮೀ ಸಿಂಗ್, ಸಹೋದರಿ ವೈಸಿರಿ ಜಗದೀಶ್ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಪಟ್ಟಿದ್ದಾರೆ..