ಬೆಂಗಳೂರು ;- ಉದ್ಯಮಿ ಬ್ರಿಜ್ ಸಿಂಗ್ ಎಂಬುವವರು ತನ್ನ ಕಂಪನಿ ನೋಂದಾಯಿಸಲು ಎದುರಿಸುತ್ತಿರುವ ಸಮಸ್ಯೆಯನ್ನು ಟ್ವೀಟ್ ಮುಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದು, ಅಮೆರಿಕಕ್ಕೆ ಹಿಂತಿರುಗಲು ಸಮಯ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಬಂಡವಾಳ ಹೂಡಿಕೆಗೆಳಿಗೆ ಪ್ರಶಸ್ತ ಸ್ಥಳ, ಉದ್ಯಮ ಸ್ನೇಹಿ ವಾತಾವರಣ ರಾಜ್ಯದಲ್ಲಿದೆ. ಹೊಸ ಹೊಸ ಕೈಗಾರಿಕಾ ನೀತಿಗಳನ್ನು ನಾವು ಜಾರಿಗೊಳಿಸುತ್ತಿದ್ದೇವೆ. ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಹರಿದು ಬರುತ್ತಿದೆ ಎಂದು ಸರ್ಕಾರ ಬೆನ್ನುತಟ್ಟಿಕೊಳ್ಳುತ್ತಿರುವಾಗಲೇ ನೋಂದಣಿ ಸಾಧ್ಯವಾಗದೇ ಉದ್ಯಮಿಯೊಬ್ಬರು ಅಮೆರಿಕಕ್ಕೆ ಮರಳುವ ಮಾತನ್ನಾಡಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
ಎರಡು ತಿಂಗಳು ಕಳೆದರೂ ತನ್ನ ಕಂಪನಿಯನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ನಾನು ಅಮೆರಿಕಕ್ಕೆ ಮರಳುವ ಸಮಯ ಬಂದಿದೆ. ಇದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ. ಬೆಂಗಳೂರು ಮತ್ತು ಭಾರತದ ಬಗ್ಗೆ ಪ್ರೀತಿಯಿದೆ. ಆದರೆ ಬೆಂಗಳೂರಿನಲ್ಲಿ ಕಂಪನಿಯನ್ನು ನೋಂದಾಯಿಸಲು 2 ತಿಂಗಳುಗಳ ಕಾಲ ಪ್ರಯತ್ನಿಸಿದರೂ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ನಿಮಗೆ ಸಮಸ್ಯೆ ಆಗಿರುವುಕ್ಕೆ ಕ್ಷಮೆ ಇರಲಿ. ನಿಮ್ಮ ಕಂಪನಿ ನೋಂದಣಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅದೇನೆ ಇರಲಿ, ವೈಯುಕ್ತಿಕವಾಗಿ ಬಂದು ಭೇಟಿ ಮಾಡುವುದಾದರೆ ಸಂತೋಷ ಎಂದು ಸ್ಪಂದಿಸಿದ್ದಾರೆ.