ಬೆಂಗಳೂರು ; ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ಶನಿವಾರ ಬೆಳಿಗ್ಗೆ 11:27 ನಿಮಿಷದಿಂದ ಸಂಜೆ 4:15 ನಿಮಿಷದವರೆಗೆ ಪ್ರಾಯೋಗಿಕ ಸಂಚಾರ ನಡೆಸಿತು. ರೈಲು ಗಂಟೆಗೆ 10 ಕಿಮೀ ವೇಗದಲ್ಲಿ ಸಂಚರಿಸಿತು ಎಂದು ಬಿಎಂಆರ್ಸಿಎಲ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಬಿಎಮ್ಆರ್ಸಿಎಲ್ ಬುಧವಾರ ಬೈಯಪ್ಪನಹಳ್ಳಿ -ಕೆಆರ್ ಪುರ ಮೆಟ್ರೊ ನಿಲ್ದಾಣಗಳ ನಡುವೆ ಪ್ರಾಯೋಗಿಕ ಸಂಚಾರ ನಡೆಸಿತ್ತು.
ನೇರಳೆ ಮಾರ್ಗದ ಚಲಘಟ್ಟ-ವೈಟ್ಫೀಲ್ಡ್ ನಿಲ್ದಾಣಗಳ ನಡುವಿನ 43 ಕಿಮೀ ಸಂಚಾರವನ್ನು ಅಗಸ್ಟ್ ತಿಂಗಳಲ್ಲಿ ಆರಂಭಿಸಲು ಬಿಎಂಆರ್ಸಿಎಲ್ ಯೋಜನೆ ರೂಪಿಸಿದೆ. ಈ ಸಂಪೂರ್ಣ ಮಾರ್ಗವನ್ನು ತೆರೆಯುವುದರಿಂದ ಜನರು ಪಶ್ಚಿಮ ಭಾಗದಿಂದ ವೈಟ್ಫೀಲ್ಡ್ ಸಂಚರಿಸಲು ಅನುಕೂಲವಾಗುತ್ತದೆ ಎಂದು ತಿಳಿದು ಬಂದಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)