ಬೆಂಗಳೂರು ;- ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಟೊಮೆಟೊ ದರ ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದ್ದು, ಇಂದು ಕೆಜಿ ಟೊಮೆಟೊ ಬೆಲೆ 150 ರೂಪಾಯಿಯಿಂದ 160 ರೂಪಾಯಿ ಆಗಿದೆ.
ಕಳೆದ ಒಂದುವಾರದಿಂದ ಏರಿಳಿತವಾಗುತ್ತಿದ್ದ ಟೊಮೆಟೊ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ. ವಾರದಿಂದ ಕೆಜಿ ಟೊಮೆಟೊಗೆ 80 ರೂಪಾಯಿಯಿಂದ 90 ರೂಪಾಯಿ, ಆಗಾಗ 100ರ ಗಡಿ ದಾಟುತ್ತಿದ್ದ ಟೊಮೆಟೊ ಇಂದು ಏಕಾಏಕಿ 160 ರೂಪಾಯಿವರೆಗೆ ತಲುಪಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಹಲವೆಡೆ ಅತಿವೃಷ್ಟಿಯಿಂದಾಗಿ ಟೊಮೆಟೊ ಬೆಳೆ ನಾಶವಾಗುತ್ತಿದ್ದು, ಕಟಾವಿಗೆ ಸಿದ್ಧವಾಗುತ್ತಿದ್ದ ಟೊಮೆಟೊ ತೋಟದಲ್ಲೇ ಹಾಳಾಗುತ್ತಿವೆ. ಬೆಲೆ ಏರಿಕೆಗೆ ಇದು ಕೂಡ ಪ್ರಮಖ ಕಾರಣವಾಗಿದೆ.
![Demo](https://prajatvkannada.com/wp-content/uploads/2023/08/new-Aston-Band.jpeg)