ಚಿಕ್ಕಮಗಳೂರು: ಟೊಮೆಟೊ ಬೆಲೆ (Tomato price) ದಿಢೀರ್ ಏರಿಕೆ ಕಂಡಿರುವುದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 2 ವರ್ಷಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೊ ದರ ಹೇಳಿಕೊಳ್ಳುವಷ್ಟೇನೂ ಹೆಚ್ಚಾಗಿರಲಿಲ್ಲ. ಈ ಬೆಳೆಗೆ ಖರ್ಚು ಮಾಡಿದ್ದ ಹಣವೂ ಬೆಳೆಗಾರರ ಕೈ ಸೇರುತ್ತಿರಲಿಲ್ಲ. ಇದರಿಂದ ಹಲವು ರೈತರು ಬೆಳೆ ಮಾಡುವ ಸಾಹಸಕ್ಕೆ ಹೋಗಿರಲಿಲ್ಲ.
ಆದರೂ, ಈ ಬಾರಿ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವು ರೈತರು ನಿರಂತರವಾಗಿ ಟೊಮೆಟೊ ಬೆಳೆಯುತ್ತಲೇ ಬಂದಿದ್ದರು. ಪಾತಾಳಕ್ಕೆ ಕುಸಿದಿದ್ದ ಟೊಮೆಟೊ ದರ ಯಾವಾಗ ಏರಿಕೆ ಆಗುತ್ತದೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಕಾಫಿನಾಡಿನಲ್ಲಿ ಟೊಮೇಟೊ ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ತಲುಪಿದೆ. 26 ಕೆ.ಜೆ ಟೊಮೇಟೊ ಐದು ಸಾವಿರ ರೂಪಾಯಿಗೆ ಹರಾಜಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಚಿಕ್ಕಮಗಳೂರು ಟೊಮೇಟೊಗೆ ಭಾರಿ ಡಿಮ್ಯಾಂಡ್ ಹಿನ್ನೆಲೆ ಬೆಲೆ ಏರಿಕೆಯಾಗಿದೆ.