ಇಸ್ಲಾಮಾಬಾದ್: ಜಾಮಿಯತ್ ಉಲೇಮಾ ಇಸ್ಲಾಂ-ಫಜಲ್(ಜೆಯುಐ-ಎಫ್) ಪಕ್ಷದ ನಾಯಕರು ನಡೆಸುತ್ತಿದ್ದ ಸಭೆ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 39 ಮಂದಿ ಮೃತಪಟ್ಟು. 123 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಜರುಗಿದೆ.
ಬಾಂಬ್ ಸ್ಫೋಟದಲ್ಲಿ ಜಾಮಿಯತ್ ಉಲೇಮಾ ಇಸ್ಲಾಂ-ಫಜಲ್ ಪಕ್ಷದ ಪ್ರಭಾವಿ ನಾಯಕ ಮೌಲಾನಾ ಜಿಯಾವುಲ್ಲಾಜಾನ್ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 123 ಜನರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 12 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ಬಜೌರ್ ಜಿಲ್ಲಾತುರ್ತು ನಿರ್ವಹಣಾ ಅಧಿಕಾರಿ ಸಾದಾ ಖಾನ್ ಮಾಹಿತಿ ನೀಡಿದ್ದಾರೆ.