ತಿರುವನಂತಪುರ: ಇತ್ತೀಚೆಗೆ ಅಮೆರಿಕಾದಿಂದ (America) ಭಾರತಕ್ಕೆ ಆಗಮಿಸಿ ಕೇರಳದ (Kerala) ಆಶ್ರಮವೊಂದರಲ್ಲಿ (Ashram) ತಂಗಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದುಷ್ಕೃತ್ಯ ನಡೆಸಿದ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 376 (2) (ಎನ್) ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 31ರಂದು ಘಟನೆ ನಡೆದಿದ್ದು, 44 ವರ್ಷದ ಯುಎಸ್ ಮಹಿಳೆ ಕಡಲ ತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ಸಂದರ್ಭ ಆರೋಪಿ ಗಳು ಈ ದುಷ್ಕೃತ್ಯ ನಡೆಸಿದ್ದಾರೆ. ಮೊದಲಿಗೆ ಆರೋಪಿಗಳು ಸಿಗರೇಟ್ ಹಂಚಿಕೊಳ್ಳುವ ನೆಪದಲ್ಲಿ ಮಹಿಳೆಯ ಬಳಿ ಬಂದಿದ್ದಾರೆ. ಆಕೆ ಸಿಗರೇಟ್ ನಿರಾಕರಿಸಿದ ಸಂದರ್ಭ ಆಕೆಗೆ ಮದ್ಯ (Alcohol) ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಸೇವಿಸಿದ ಬಳಿಕ ಮಹಿಳೆಗೆ ನಶೆ ಏರಿದ್ದು, ಈ ವೇಳೆ ಆರೋಪಿಗಳು ಆಕೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿ ಸಮೀಪದ ಖಾಲಿ ಮನೆಯಲ್ಲಿ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಆಗಸ್ಟ್ 1ರಂದು ರಾತ್ರಿ ಸಂತ್ರಸ್ತೆ ದೂರನ್ನು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಆಗಸ್ಟ್ 22ರಂದು ಕೇರಳಕ್ಕೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ.