ಒಟ್ಟಾವಾ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮತ್ತು ಅವರ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯವನ್ನು ಮುಕ್ತಾಯಗೊಳಿಸಿರುವುದಾಗಿ ಘೋಷಿಸಿದ್ದಾರೆ. ‘ ಎಲ್ಲರಿಗೂ ನಮಸ್ಕಾರ. ಸೋಫಿ ಮತ್ತು ನಾನು ಸಾಕಷ್ಟು ಅರ್ಥಪೂರ್ಣ ಮತ್ತು ಕಷ್ಟಕರ ಸಂಭಾಷಣೆಗಳ ನಂತರ, ನಾವು ಪ್ರತ್ಯೇಕಗೊಳ್ಳುವ ನಿರ್ಧಾರವನ್ನು ಮಾಡಿದ್ದೇವೆ ಎಂದು ಹಂಚಿಕೊಳ್ಳಲು ಬಯಸುತ್ತೇವೆ’ ಎಂದು ಜಸ್ಟಿನ್’ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಇನ್ನು ಮುಂದುವರೆದು ಮಾತನಾಡುತ್ತಾ, ‘ಯಾವಾಗಲೂ, ನಾವು ಒಬ್ಬರಿಗೊಬ್ಬರು ಆಳವಾದ ಪ್ರೀತಿ ಮತ್ತು ಗೌರವವನ್ನು ಹೊಂದಿರುವ ನಿಕಟ ಕುಟುಂಬವಾಗಿ ಉಳಿಯುತ್ತೇವೆ. ನಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ, ನಮ್ಮ ಮತ್ತು ಅವರ ಗೌಪ್ಯತೆಯನ್ನು ನೀವು ಗೌರವಿಸಬೇಕೆಂದು ನಾವು ಕೇಳುತ್ತೇವೆ. ಧನ್ಯವಾದ’ ಎಂದು ತಮ್ಮ ಹೇಳಿಕೆಯನ್ನು ಮುಗಿಸಿದ್ದಾರೆ. ಜಸ್ಟಿನ್ ಮತ್ತು ಸೋಫಿ 2005 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕ್ಸೇವಿಯರ್, 15, ಎಲಾ-ಗ್ರೇಸ್, 14, ಮತ್ತು ಹ್ಯಾಡ್ರಿಯನ್, 9 ಎಂಬ ಮೂರು ಮಕ್ಕಳಿದ್ದಾರೆ.