ರೋಮ್: ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI- Belt and Road Initiative) ಎಂಬ ಜಾಗತಿಕ ಇನ್ ಫ್ರಾಸ್ಟ್ರಕ್ಚರ್ ಯೋಜನೆಯಿಂದ ಇಟಲಿ ಹೊರಬೀಳಲು ಸಜ್ಜಾದಂತಿದೆ. ಇಟಲಿಯ ರಕ್ಷಣಾ ಸಚಿವ ಜುಯಿಡೋ ಕ್ರೋಸೆಟ್ಟೋ (Guido Crosetto) ಈ ಬಗ್ಗೆ ಸುಳಿವು ನೀಡಿದ್ದಾರೆ. ಚೀನಾ ಜೊತೆ ಸ್ನೇಹ ಸಂಬಂಧ ಉಳಿಸಿಕೊಂಡು ಈ ಬಿಆರ್ಐ ಯೋಜನೆಯಿಂದ ಹೊರಬರುವುದು ಹೇಗೆ ಎಂದು ಯೋಚಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಗ್ಯೂಡೋ ಕ್ರೋಸೆಟ್ಟೋ ಅವರು ಚೀನಾ ಮತ್ತು ಇಟಲಿ ನಡುವಿನ ಭವಿಷ್ಯದ ಸಂಬಂಧದ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಚೀನಾ ನಮಗೆ ಪ್ರತಿಸ್ಪರ್ಧಿ ದೇಶವಾಗಿದೆ. ಹಾಗೆಯೇ ಅದು ನಮಗೆ ಸಹಭಾಗಿ ದೇಶವೂ ಹೌದು ಎಂದು ಹೇಳಿದ ಗ್ಯೂಡೋ ಕ್ರೋಸೆಟ್ಟೋ, ಬಿಆರ್ಐ ಯೋಜನೆಯಲ್ಲಿ ಷಾಮೀಲಾಗದೆಯೇ ಚೀನಾ ಜೊತೆ ಇಟಲಿ ಒಳ್ಳೆಯ ಸಂಬಂಧದಲ್ಲಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ