ಪಾಟ್ನಾ: ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ (Dowry) ಫ್ರಿಡ್ಜ್ ಗಿಫ್ಟ್ (Refrigerator Gift) ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಅಂಗೂರಿ ಬೇಗಂ (30) ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು. ಇದೀಗ ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು ಬಾಮೈದರೇ ಕೊಲೆ ಮಾಡಿದ್ದಾರೆ.
ಕೊಲೆ ನಡೆದ ಬೆನ್ನಲ್ಲೇ ಅಂಗೂರಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ