ನಾನ್ ವೆಜ್ ನಲ್ಲೇ ತುಂಬಾ ರೀತಿಯ ರಿಸಿಪಿಗಳು ಇಷ್ಟ ಪಡುವಂತವರನ್ನು ನೋಡಬಹುದು. ಕೆಲವರಿಗೆ ಹೆಚ್ಚು ಮಸಾಲೆ ಹಾಕಿದ ಅಡುಗೆ ಇಷ್ಟವಾದರೆ, ಇನ್ನಷ್ಟು ಜನರಿಗೆ ಮಸಾಲೆ ಕಡಿಮೆ ಇರಬೇಕು.
ಹಾಗಾಗಿ ಮಸಾಲೆ ಕಡಿಮೆ ಹಾಕಿದರು ಸಹ ಎಲ್ಲರಿಗೂ ತುಂಬಾ ಇಷ್ಟವಾಗುವಂತಹ ಈ ಚಿಕನ್ ಲೆಗ್ ಫ್ರೈ ರೆಸಿಪಿ ಮಿಸ್ ಮಾಡದೇ ನಿಮ್ಮ ಮನೆಯಲ್ಲಿ ಮಾಡಿ ರುಚಿ ಸವಿಯಿರಿ.
ಬೇಕಾಗಿರುವ ಸಾಮಾಗ್ರಿಗಳು
* ಚಿಕನ್ – 500 ಗ್ರಾಂ
* ಮೈದಾ – ಅರ್ಧ ಕಪ್
* ಕಡಲೆ ಹಿಟ್ಟು – 1 ಕಪ್
* ಸೋಯಾ ಸಾಸ್ – 2 ಟೀಸ್ಪೂನ್
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
* ಹಸಿರು ಮೆಣಸಿನಕಾಯಿ – 2-3
* ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ – 1 ಟೀಸ್ಪೂನ್
* ಕಪ್ಪು ಮೆಣಸು ಪುಡಿ – 1/2 ಟೀಸ್ಪೂನ್
* ಚಾಟ್ ಮಸಾಲಾ – 1/2 ಟೀಸ್ಪೂನ್
* ಜೀರಿಗೆ ಪುಡಿ – 1/2 ಟೀಸ್ಪೂನ್
* ಗರಂ ಮಸಾಲಾ – 1/2 ಟೀಸ್ಪೂನ್
* ಮೊಟ್ಟೆ – 1
* ಅರಿಶಿನ ಪುಡಿ – 1/4 ಟೀಸ್ಪೂನ್
* ರುಚಿಗೆ ತಕ್ಕಂತೆ ಉಪ್ಪು
* ಹುರಿಯಲು ಎಣ್ಣೆ
ಮಾಡುವ ವಿಧಾನ
* ಮೊದಲು ನಾವು ಚಿಕನ್ ಅನ್ನು ಮ್ಯಾರಿನೇಟ್ ಮಾಡಬೇಕಾಗಿದೆ. ಚಿಕನ್ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಕರಿಮೆಣಸಿನ ಪುಡಿ, ಕಟ್ ಮಾಡಿದ ಹಸಿರು ಮೆಣಸಿನಕಾಯಿಗಳು, ಅರಿಶಿನ ಪುಡಿ, ಚಾಟ್ ಮಸಾಲ, ಸೋಯಾ ಸಾಸ್, ಮೊಟ್ಟೆ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
* ಅಂತಿಮವಾಗಿ ಕಡ್ಲೆ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್ಗೆ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಲೇಪಿಸಿ.
* ಚಿಕನ್ ಮಿಶ್ರಣವನ್ನು 30 ನಿಮಿಷಗಳ ಕಾಲ ಬಿಡಿ.
* ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಮಧ್ಯಮ ಉರಿಯಲ್ಲಿ ಚಿಕನ್ ಮಿಶ್ರಣವನ್ನು ಒಂದೊಂದಾಗಿ ಫ್ರೈ ಮಾಡಿ.
* ಸುಮಾರು 10-12 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಚಿಕನ್ ಫ್ರೈ ಮಾಡಿ.
* ಚಿಕನ್ನ ಎರಡು ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಚೆನ್ನಾಗಿ ಹುರಿಯಿರಿ.