ಬೆಂಗಳೂರು: ಸ್ಪಂದನಾ ಅಂತಿಮ ದರ್ಶನ ಪಡೆದ ವಿನೋದ್ ರಾಜ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಕಾಲಿಕ ಮರಣದ ಬಗ್ಗೆ ನಾವು ಏನೂ ಮಾತನಾಡೋಕೆ ಆಗಲ್ಲ. ವಿಜಯ ರಾಘವೇಂದ್ರ ನೊಂದಿರೋದನ್ನ ನೋಡಿದಾಗ ಅವರಿಗೆ ದೇವರು ಅಪಾರವಾದ ಶಕ್ತಿ ಕೊಟ್ಟು ಕಾಪಾಡಲಿ. ನಾವು ಎಷ್ಟೇ ಧೈರ್ಯ ಹೇಳಿದ್ರು ಸಾಲಲ್ಲ. ಅವರೇ ಅವರ ಗಾಯವನ್ನ ಸರಿ ಮಾಡಿಕೊಳ್ಳಬೇಕಾಗುತ್ತದೆ. ಈ ಚಿಕ್ಕ ವಯಸ್ಸಿನಲ್ಲಿ ಸ್ಪಂದನಾಗೆ ಹೀಗೆ ಆಗಬಾರದಿತ್ತು. ವಿಧಿಯ ಲೀಲೆ ಇದು, ನನಗೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನಟ ವಿನೋದ್ ರಾಜ್ (Vinod Raj) ಭಾವುಕರಾಗಿದ್ದಾರೆ.
ಯಾರ ಮಾತಿನಿಂದಲೂ ಆರುವಂತಹ ನೋವಲ್ಲ ಅದು. ವಿಧಿ ಆಟನೋ ದೇವರೋ ಸ್ಪಂದನಾ ಸ್ಥಿತಿ ನೋಡಿದ್ರೆ ಏನು ಹೇಳೋಕೆ ಆಗುತ್ತಿಲ್ಲ. ವಿಚಿತ್ರ ಇದು ನಮಗೆ ತಲೆ ಕೆಟ್ಟು ಹೋಗುತ್ತಿದೆ. ಈಗ ನಾನು ಮತ್ತು ಅಮ್ಮಾ ಕೂಡ ಟೆಸ್ಟ್ ಮಾಡಿಕೊಂಡಿದ್ವಿ. ನಾನು ಹೋದರೆ ಕೂಡ ನನ್ನ ತಾಯಿನ ನೋಡಿಕೊಳ್ಳೋಕೆ ಯಾರು ಇಲ್ಲ. ದೇವರನ್ನ ಯಾವ ರೀತಿ ಕೈ ಮುಗಿಬೇಕು ಅಂತಾ ನಮಗೆ ಗೊತ್ತಾಗುತ್ತಿಲ್ಲ. ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ ಅಂತಾ ನಮಗೆ ಅರ್ಥ ಆಗುತ್ತಿಲ್ಲ. ದೇವರನ್ನ ಪೂಜೆ ಮಾಡಿದಕ್ಕೆ ಈ ಪ್ರತಿಫಲ ಕೊಟ್ರಾ ತಿಳಿಯುತ್ತಿಲ್ಲ.