ನವದೆಹಲಿ: ಜಿಮ್ನಲ್ಲಿ ಸಖತ್ತಾಗಿ ವರ್ಕ್ ಔಟ್ ಮಾಡಿ ಫಿಟ್ ಆಗಬೇಕು ಅಂತ ಈಗಿನ ಯುವಪೀಳಿಗೆಯವರು ಬಯಸುತ್ತಾರೆ. ಹಾಗೆ ವರ್ಕ್ ಔಟ್ ಮಾಡುವಾಗ ಅತೀ ಉತ್ಸಾಹದಲ್ಲಿ ಹೆಚ್ಚಿನ ತೂಕ ಹಾಕಿಕೊಂಡು ಕಸರತ್ತು ಮಾಡಲು ಹೋದ್ರೆ ಏನಾಗಬಹುದು ಅನ್ನೋದಕ್ಕೆ ಈ ವೀಡಿಯೋ ಉದಾಹರಣೆ.
ಯುವಕನೊಬ್ಬ ಜಿಮ್ನಲ್ಲಿ ಕಸರತ್ತು ಮಾಡಲು ಹೋಗಿ ಕಾಲು ಮುರಿದುಕೊಂಡಿದ್ದಾನೆ. ಕಾಲಿನ ವರ್ಕ್ ಔಟ್ ಮಾಡುತ್ತಿದ್ದ ಯುವಕ ಒದ್ದಾಡುತ್ತಲೇ ನಿಧಾನವಾಗಿ ತೂಕವನ್ನು ಎತ್ತಿದ್ದಾನೆ. ಕೆಲವೇ ನಿಮಿಷಗಳಲ್ಲಿ ಆತನ ಎಡಗಾಲು ಮುರಿದು ಮಂಡಿಯ ಭಾಗದಲ್ಲಿ ಹಿಂದಕ್ಕೆ ಬಾಗಿದೆ. ವೀಡಿಯೋ ಮಾಡುತ್ತಿದ್ದ ಮತ್ತೊಬ್ಬ ಯುವಕ ಇದನ್ನ ನೋಡಿ ಗಾಬರಿಯಿಂದ ಗಾಯಗೊಂಡು ಯುವಕನ ಬಳಿ ಧಾವಿಸಿದ್ದಾನೆ. ಈ ವೀಡಿಯೋ ಚಿತ್ರೀಕರಣ ಮಾಡಲಾದ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ವರ್ಕ್ ಔಟ್ ಮಾಡುವಾಗ ಎಷ್ಟು ಎಚ್ಚರವಾಗಿರಬೇಕು ಎನ್ನುವುದರ ಬಗ್ಗೆ ಎಚ್ಚರಿಕೆ ನೀಡಲು ಈ ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು ಇದೀಗ ವೈರಲ್ ಆಗಿದೆ. ಒಂದೇ ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ವ್ಯೂವ್ ಕಂಡಿದ್ದು, 45 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.