ಬೆಂಗಳೂರು: ಐಸಿಸಿ ಆಯೋಜಿತ ಟೂರ್ನಿಗಳಲ್ಲಿ 2013ರಿಂದ ಟ್ರೋಫಿ ಗೆಲುವಿನ ಬರ ಎದುರಿಸಿರುವ ಟೀಮ್ ಇಂಡಿಯಾ, ಈ ವರ್ಷ ತಾಯ್ನಾಡಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಗೆದ್ದು ಬರ ನೀಗಿಸಿಕೊಳ್ಳುವ ಲೆಕ್ಕಾಚಾರ ಮಾಡಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ಟೂರ್ನಿಯು ಇದೇ ಮೊದಲ ಬಾರಿ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ಆಯೋಜನೆ ಆಗುತ್ತಿದೆ.
ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೀಮ್ ಇಂಡಿಯಾದ ಒಡಿಐ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್ ಅನ್ಫಿಟ್ ಎಂದಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನೂ ವಿವರಿಸಿದ್ದಾರೆ.
ಸದ್ಯ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟರ್ ಸಲುವಾಗಿ ಟೀಮ್ ಮ್ಯಾನೇಜ್ಮೆಂಟ್ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿದೆ. ಈ ಕ್ರಮಾಂಕಕ್ಕೆ ಮೊದಲ ಆಯ್ಕೆ ಆಗಿದ್ದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್ ರಾಹುಲ್ ಗಾಯದ ಸಮಸ್ಯೆಗಳಿಂದ ಚೇತರಿಸುತ್ತಿದ್ದಾರೆ. ಹೀಗಾಗಿ ಮಹತ್ವದ ಟೂರ್ನಿಗಳಿಗೂ ಮುನ್ನ ಅವರ ಮ್ಯಾಚ್ ಫಿಟ್ನೆಸ್ ಬಗ್ಗೆ ಸ್ಪಷ್ಟತೆ ಇಲ್ಲ. ಈ ನಡುವೆ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವರನ್ನು ಈ ಕ್ರಮಾಂಕಗಳಲ್ಲಿ ಪ್ರಯೋಗ ಮಾಡಲಾಗಿದೆ ಆದರೂ ತೃಪ್ತಿದಾಯಕ ಫಲಿತಾಂಶ ಬಂದಿಲ್ಲ
ವೆಸ್ಟ್ ಇಂಡೀಸ್ ವಿರುದ್ಧದ ಒಡಿಐ ಸರಣಿಯಲ್ಲಿ ಸಂಜು ಅವಕಾಶ ಪಡೆದು 3ನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು. ಸದ್ಯಕ್ಕೆ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಸಿಗುತ್ತಿದೆ. ಆದರೆ ಅವರು ಐಪಿಎಲ್ನಲ್ಲಿ 3ನೇಕ್ರಮಾಂಕದ ಒಳಗೆ ಹೆಚ್ಚಾಗಿ ಬ್ಯಾಟ್ ಮಾಡುತ್ತಾರೆ. ಅಂದಹಾಗೆ ಒಡಿಐನಲ್ಲಿ ಈವರೆಗೆ ಸಿಕ್ಕಿರುವ ಅವಕಾಶಗಳಲ್ಲಿ ಅವರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು. ಕ್ರೀಸ್ಗೆ ಬಂದ ಕೂಡಲೇ ಸ್ಪಿನ್ನರ್ಗಳ ಎದುರು ಆಕ್ರಮಣಕಾರಿ ಆಟವಾಡಿದ್ದಾರೆ. ಅದು ಅವರಲ್ಲಿನ ವಿಶೇಷತೆ ಕೂಡ,” ಎಂದು ಅಶ್ವಿನ್ ಹೇಳಿದ್ದಾರೆ.